Friday, July 12, 2013

ಅವಸರವೇ ಅಪಘಾತಕ್ಕೆ ಕಾರಣ !!! ...

    ಹಲವು ಸಲ ನಮಗೆ ನಮ್ಮ ಮೇಲೆ ಅತಿಯಾದ ವಿಶ್ವಾಸ ಇರುತ್ತದೆ. ಯಾರು ಏನೇ ಹೇಳಲಿ ನಮ್ಮಲ್ಲಿ ಸಿದ್ಧ ಉತ್ತರ ಬರುತ್ತದೆ. ಏನು? ಅಷ್ಟು ಗೊತ್ತಿಲ್ವಾ ನಮಗೆ? ಅವನಿಂದ ಕಲೀಬೇಕಾ? ಎಂಬುದು. ಬಹುಶಃ ನಾವು ಸ್ವಲ್ಪ ಜಾಗರೂಕತೆಯಿಂದ ವಾಸ್ತವತೆಯತ್ತ ಗಮನ ಹರಿಸಿದರೆ ಎಷ್ಟೋ ವಿಷಯಗಳ ಸಮಾಧಾನ ದೊರೆಯಬಹುದು. ಉದಾಹರಣೆಗೆ ಕೆಲವು ದಿನಗಳ ಹಿಂದೆ ಓದಿದ ಕಾಲಮ್ ನೆನಪಿಗೆ ಬರುತ್ತದೆನಮ್ಮ ಬಿ. ಎಂ. ಟಿ. ಸಿ. ಬಸ್ ಹಲವು ಅಪಘಾತಗಳನ್ನು ಗಮನಿಸಿದವರು ಒಂದು ಉತ್ತಮವಾದ ಕಾರಣವನ್ನು ನೀಡಿದ್ದಾರೆ. ಅದೆಂದರೆ, ಹಲವು ಅಪಘಾತಗಳಿಗೆ ಡ್ರೈವರ್ ಜವಾಬ್ದಾರನೇ ಆಗಿರುವುದಿಲ್ಲ ಎಂಬುದು. ಅಪಘಾತಗಳಲ್ಲಿ ಹೆಚ್ಚಾಗಿ ಬೇರೆ ವಾಹನಗಳ ಸವಾರರು ಬಸ್ ನಿಂದ ತಪ್ಪಿಸಿಕೊಳ್ಳಲು ಹೋಗಿ, ಡಿವೈಡರ್ ಗೆ ಗುದ್ದಿ ಬಸ್ ಚಕ್ರದಡಿಗೆ ಬಿದ್ದಿರುತ್ತಾರೆ. ಹಾಗಾಗಿ ಡಿವೈಡರ್ ಹತ್ತಿರ ಬಂದಾಗ ಪ್ರತಿಯೊಬ್ಬರೂ ಜಾಗರೂಕತೆಯಿಂದ ಇರುವುದು ಅಗತ್ಯ.

     ಕೆಲವು
ಸಲ ನಮಗೆ ನಮಗೆ ಅಕ್ಕಪಕ್ಕದವರ ಆಕ್ಸಿಡೆಂಟ್ ಕಥೆ ಕೇಳಿದಾಗ ನಗು ಬರುವುದು  ಉಂಟು; ಬೇಸರವಾಗುವುದು ಉಂಟು. ಹೀಗಾಗಿ ಸರ್ವ ಜನ ಹಿತಕ್ಕಾಗಿ ಕೆಲವು ಅಪಘಾತಗಳ ಬಗ್ಗೆ ಹೇಳೋಣ ಅನಿಸಿದೆ ನನಗೆ. ಇತ್ತೀಚೆಗೆ ನನ್ನ ಕೊಲೀಗ್ ಇದ್ದವಳು ಹೇಳುತ್ತ ಇದ್ದ ಮಾತು ನೆನಪಿಗೆ ಬರುತ್ತಿದೆ. ಹೈವೇಯಲ್ಲಿ ಆರಾಮದಲ್ಲಿ ಎಂಬತ್ತರ ಮೇಲಿನ ವೇಗದಲ್ಲಿ ಹೋಗಬಹುದು ಎನ್ನುವುದು ಅವಳ ವಾದ. ಆಗ ನಗೆ ಗೊತ್ತಿರುವವರಿಗೇ ನಡೆದ ಒಂದು ಘಟನೆಯ ಬಗ್ಗೆ  ಹೇಳಬೇಕೆನಿಸಿತು. ನನಗೆ ಗೊತ್ತಿರುವವರೊಬ್ಬರು, ಕುಣಿಗಲ್ ಹತ್ತಿರ ಬೈಕ್ ನಲ್ಲಿ ಎಂಬತ್ತರ ಮೇಲಿನ ವೇಗದಲ್ಲಿ ಹೋಗುವಾಗ ದನ ಅಡ್ಡ ಬಂದು ಕಾಲಿಗೆ ಸ್ಟೀಲ್ ರಾಡ್ ಹಾಕಿಸಿಕೊಂಡು ಮೂರು ತಿಂಗಳು ಮನೆಯಲ್ಲೇ ಮಲಗಿದ್ದರು. ಹಾಗಾಗಿ ಹೈವೇಯಲ್ಲಿ ಹೋಗುವಾಗ ದನ ಮತ್ತು ಅಡ್ಡ ದಾರಿಗಳ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

     ಬೆಂಗಳೂರಿನಲ್ಲಿ
ಸಣ್ಣ ಗಲ್ಲಿಗಳಿಗೇನು ಕಡಿಮೆ ಇಲ್ಲ ಬಿಡಿ. ಬೆಂಗಳೂರಿನಲ್ಲಿ ವೇಗಕ್ಕಿಂತ ಹೆಚ್ಕ್ಚಾಗಿ ಯಾವುದಾದರೂ ವಾಹನ ಬರಬಹುದೋ ಏನೋ ಎನ್ನುವ ನಿರೀಕ್ಷೆ ಬಹಳ ಮುಖ್ಯ. ಹಲವು ಸಲ ನನ್ನ ಗೆಳೆಯರು ಕಡಿಮೆ ವೇಗದಲ್ಲಿಯೇ ಹೋಗಿ ಬಿದ್ದು ಎದ್ದದ್ದಿದ್ದೆ :). ಜೀವನದಲ್ಲಿ ಬಿದ್ದವನಿಗಿಂತ ಬೈಕಿನಿಂದ ಬೀಳುವುದು ಒಳಿತು ಎನ್ನುವ ವೇದಾಂತ ಬಿಟ್ಟಿದ್ದು ಇದೆ. ಬೆಂಗಳೂರಿನಲ್ಲಿ ರಾತ್ರಿ ಸವಾರರದು ಅಪಘಾತ ಕೇಳಲು ಮಜ ಇರುತ್ತದೆ. ಮಾರ್ಗ ಬಹಳ ಅಗಲವಿದೆ ಎನ್ನುವ ಖುಶಿಯಲ್ಲಿ ಗಾಡಿ ಓಡಿಸುವಾಗ ಲಗಾಮಿಲ್ಲದೆ ದಡಾರ್ ಅಂತ ಬಿದ್ದು  ಸ್ಟೀಲ್ ರಾಡ್ ಹಾಕಿಸಿಕೊಂಡವರಿಗೇನು ಕಡಿಮೆ ಇಲ್ಲ. ಲಗಾಮಿಲ್ಲದ ಕುದುರೆ ಯಾವಾಗಲು ಡೆಂಜರ್!!. ಅಪಘಾತವಾಗಲು ಕೇವಲ ನಾವು ಕಾರಣೀಭೂತರಾಗಬೇಕಿಲ್ಲ. ನಮ್ಮ ಎದುರಲ್ಲಿ ಬರುವವನಿಂದಲೂ ಆಗಬಹುದು. ಹಾಗಾಗಿ ಗಾಡಿಯ ಲಗಾಮು ಹಿಡಿದವನು ಎಚ್ಚರದಿಂದಿರುವುದು ಅಗತ್ಯ.

      ಬಹುಶಃ ನಾವು ಕಲಿಯುವಾಗಲೇ ಇಂತಹ ವಿಷಯಗಳ ಬಗ್ಗೆ ಜಾಗ್ರತೆ ವಹಿಸಿದರೆ ಒಳಿತು ಎನ್ನುವುದು ನನ್ನ ಭಾವನೆ. ನನ್ನ ಪತ್ನಿಗೆ ವಾಹನ ಬಿಡಲು ಕಲಿಸುವಾಗ ನಾನು "ಡಿವೈಡರ್" ಅಂತ ಜೋರಾಗಿ ಕಿರುಚುತ್ತಿದ್ದೆ. ಈಗಲೂ ಅವಳಿಗೆ ಡಿವೈಡರ್ ಹತ್ತಿರ ಹೋಗುವಾಗ ನನ್ನ ಮಾತು ನೆನಪು ಬರುತ್ತಿರುತ್ತದೆ ಎನ್ನುತ್ತಿರುತ್ತಾಳೆ :). ಹಾಗಾದರೂ ನೆನಪಿದೆಯಲ್ಲ! ಎನ್ನುವುದೇ ನನಗಿರುವ ನೆಮ್ಮದಿ.

     ನಾನು ಅಪಘಾತಗಳ ಬಗ್ಗೆ ಬರೆದೆನೆಂದು ಕೆಲವರ ಮನ ನೊಂದಿರಬಹುದು. ಓದುವವರಿಗೆ ಎಚ್ಚರ ಮೂಡಿಸುವುದಷ್ಟೇ ನನ್ನ ಲೇಖನದ ಗುರಿ. ಓದುಗರಿಗೆ ವಾಹನ ತೆಗೆದುಕೊಳ್ಳದಂತೆ ಮಾಡಿ ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡುವ ಉದ್ದೇಶ ಕಂಡಿತಾ ನನ್ನಲ್ಲಿಲ್ಲಹಾಗೆ ಹೇಳುವುದಾದರೆನಾವು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗಲೂ ಅಪಘಾತವಾಗಬಹುದು.
ಆದರೆ ಅದೇ ನಮಗೆ ರಸ್ತೆಗೇ ಇಳಿಯದಂತೆ ಮಾಡಬಾರದಲ್ಲವೇ?

     ಹೀಗೆ ಹಗುರವಾಗಿ ಹೇಳುವುದಾದರೆ ಮತ್ತೊಂದು ಮಾತು ನೆನಪಿಗೆ ಬರುತ್ತಿದೆ. ನನ್ನ ಕೊಲೀಗ್ ಇದ್ದವಳು ಹೇಳುತ್ತಿದ್ದಳು: ಸಪೂರವಾಗಿ ಇರುವವರಿಗೆ ಅಪಘಾತವಾದಾಗ ಅವರಿಗೆ ಜಾಸ್ತಿ ನೋವಾಗುವುದಂತೆಅದಕ್ಕೆ ನಾನು ಹೇಳಿದೆಹಾಗಾದರೆ ದಪ್ಪ ಇರುವುವರಿಗೆ ಅಪಘಾತವಾದರೆ ರಸ್ತೆಗೆ ನೋವಾಗುತ್ತಾ? ಅಂತ. !!!

Tuesday, July 9, 2013

ನಾನು ಹಾಕಿರೋದು ಸಿಕ್ ಲೀವೆ ಸಾರ್...

ನಾನು ಹಾಕಿರೋದು ಸಿಕ್ ಲೀವೆ ಸಾರ್...

ನಮ್ಮ ಕಂಪನಿಯಲ್ಲಿ ನಡೆದ ಒಂದು ಘಟನೆ ನನಗೆ ನೆನಪಾಗುತ್ತಿದೆ. ಅದೊಂದು ದಿನ ನನ್ನ ಕೋಲೀಗ್ ಒಬ್ಬನ ಅಜ್ಜನಿಗೆ ಹುಷಾರಿಲ್ಲದ ಕಾರಣ ರಜೆ ಬೇಕಾಗಿತ್ತು. ಅದಕ್ಕವನು ನಮ್ಮ ಮ್ಯಾನೇಜರ್ ಮಾತ್ರವಲ್ಲ; ಎಲ್ಲರಲ್ಲೂ ಹೇಳಿ ರಜಾದಮೇಲೆ ಮನೆಗೆ ಹೋಗಿದ್ದಹಾಗೆ ಮೂರು ದಿನ ಬಿಟ್ಟು ಬಂದು ನಮ್ಮ ಲೀವ್ ಸಿಸ್ಟಂ ನಲ್ಲಿ ಸಿಕ್ ಲೀವ್ ಹಾಕಿಬಿಟ್ಟ.
ನಮ್ಮ
 ಮ್ಯಾನೇಜರ್ ಗೆ ರೇಗಿ ಹೋಯಿತು.
 ಏನಪ್ಪಾ !! ಊರೆಲ್ಲ ಅಜ್ಜನಿಗೆ ಹುಷಾರಿಲ್ಲ ಅಂತ ಹೇಳಿದ್ದಿಯಅದು ಹೇಗೆ ಸಿಕ್ ಲೀವ್ ಹಾಕಿದ್ದೀಯಎಂದು ಗದರಿಸಿದಾಗ,
ಕೊಲೀಗ್
ಇದ್ದವನು ಬೆರಗಾಗಿ,
ಸಾರ್
ಅದರಲ್ಲಿ ಅಜ್ಜನಿಗೆ ಹುಷಾರಿರಲಿಲ್ಲ ಅಂತ ಹಾಕಿದ್ದೀನಲ್ಲ ಎಂದು ಹೇಳಿಬಿಟ್ಟ !

ಕನ್ನಡದ ಕೊಲೆ.

ಒಂದು ದಿನ ಒಂದು ಟೆಂಪೋದ ಹಿಂದೆ ಹೋಗುತ್ತಿದ್ದೆ. ಆಗ ಕಂಡ ಒಂದು ಟ್ಯಾಗ್ ಲೈನ್.
ನಿಜವಾಗಿ ಅದು ಆಗ ಬೇಕಿದ್ದದ್ದು:
"ಕನ್ನಡದ ತೇರು; ಕೈ ಮುಗಿದು ಏರು."
ಟೆಂಪೋದ ಟ್ಯಾಗ್ ಲೈನ್:
"
ಕನ್ನಡದ ತೆರುಕೈ ಮುಗಿದು ಹೆರು."