skip to main |
skip to sidebar
ಹಲವು
ಸಲ
ನಮಗೆ
ನಮ್ಮ
ಮೇಲೆ
ಅತಿಯಾದ
ವಿಶ್ವಾಸ
ಇರುತ್ತದೆ.
ಯಾರು
ಏನೇ
ಹೇಳಲಿ
ನಮ್ಮಲ್ಲಿ
ಸಿದ್ಧ
ಉತ್ತರ
ಬರುತ್ತದೆ.
ಏನು?
ಅಷ್ಟು
ಗೊತ್ತಿಲ್ವಾ
ನಮಗೆ?
ಅವನಿಂದ
ಕಲೀಬೇಕಾ?
ಎಂಬುದು.
ಬಹುಶಃ
ನಾವು
ಸ್ವಲ್ಪ
ಜಾಗರೂಕತೆಯಿಂದ
ವಾಸ್ತವತೆಯತ್ತ
ಗಮನ
ಹರಿಸಿದರೆ
ಎಷ್ಟೋ
ವಿಷಯಗಳ
ಸಮಾಧಾನ
ದೊರೆಯಬಹುದು.
ಉದಾಹರಣೆಗೆ
ಕೆಲವು
ದಿನಗಳ
ಹಿಂದೆ
ಓದಿದ
ಕಾಲಮ್ ನೆನಪಿಗೆ ಬರುತ್ತದೆ.
ನಮ್ಮ ಬಿ.
ಎಂ.
ಟಿ.
ಸಿ.
ಬಸ್
ನ
ಹಲವು
ಅಪಘಾತಗಳನ್ನು
ಗಮನಿಸಿದವರು
ಒಂದು
ಉತ್ತಮವಾದ
ಕಾರಣವನ್ನು
ನೀಡಿದ್ದಾರೆ.
ಅದೆಂದರೆ,
ಹಲವು
ಅಪಘಾತಗಳಿಗೆ
ಡ್ರೈವರ್
ಜವಾಬ್ದಾರನೇ
ಆಗಿರುವುದಿಲ್ಲ
ಎಂಬುದು.
ಆ
ಅಪಘಾತಗಳಲ್ಲಿ
ಹೆಚ್ಚಾಗಿ
ಬೇರೆ
ವಾಹನಗಳ
ಸವಾರರು
ಬಸ್
ನಿಂದ
ತಪ್ಪಿಸಿಕೊಳ್ಳಲು
ಹೋಗಿ,
ಡಿವೈಡರ್
ಗೆ
ಗುದ್ದಿ
ಬಸ್
ನ
ಚಕ್ರದಡಿಗೆ
ಬಿದ್ದಿರುತ್ತಾರೆ.
ಹಾಗಾಗಿ
ಡಿವೈಡರ್
ಹತ್ತಿರ
ಬಂದಾಗ
ಪ್ರತಿಯೊಬ್ಬರೂ
ಜಾಗರೂಕತೆಯಿಂದ ಇರುವುದು
ಅಗತ್ಯ.
ಕೆಲವು
ಸಲ
ನಮಗೆ
ನಮಗೆ
ಅಕ್ಕಪಕ್ಕದವರ
ಆಕ್ಸಿಡೆಂಟ್
ಕಥೆ
ಕೇಳಿದಾಗ
ನಗು
ಬರುವುದು
ಉಂಟು;
ಬೇಸರವಾಗುವುದು
ಉಂಟು.
ಹೀಗಾಗಿ
ಸರ್ವ
ಜನ
ಹಿತಕ್ಕಾಗಿ
ಕೆಲವು
ಅಪಘಾತಗಳ
ಬಗ್ಗೆ
ಹೇಳೋಣ
ಅನಿಸಿದೆ
ನನಗೆ.
ಇತ್ತೀಚೆಗೆ
ನನ್ನ
ಕೊಲೀಗ್
ಇದ್ದವಳು
ಹೇಳುತ್ತ
ಇದ್ದ
ಮಾತು
ನೆನಪಿಗೆ
ಬರುತ್ತಿದೆ.
ಹೈವೇಯಲ್ಲಿ
ಆರಾಮದಲ್ಲಿ
ಎಂಬತ್ತರ
ಮೇಲಿನ
ವೇಗದಲ್ಲಿ
ಹೋಗಬಹುದು
ಎನ್ನುವುದು
ಅವಳ
ವಾದ.
ಆಗ
ನನಗೆ
ಗೊತ್ತಿರುವವರಿಗೇ
ನಡೆದ
ಒಂದು
ಘಟನೆಯ
ಬಗ್ಗೆ
ಹೇಳಬೇಕೆನಿಸಿತು.
ನನಗೆ
ಗೊತ್ತಿರುವವರೊಬ್ಬರು,
ಕುಣಿಗಲ್
ಹತ್ತಿರ
ಬೈಕ್
ನಲ್ಲಿ
ಎಂಬತ್ತರ
ಮೇಲಿನ
ವೇಗದಲ್ಲಿ ಹೋಗುವಾಗ
ದನ
ಅಡ್ಡ
ಬಂದು
ಕಾಲಿಗೆ
ಸ್ಟೀಲ್
ರಾಡ್
ಹಾಕಿಸಿಕೊಂಡು
ಮೂರು
ತಿಂಗಳು
ಮನೆಯಲ್ಲೇ
ಮಲಗಿದ್ದರು.
ಹಾಗಾಗಿ
ಹೈವೇಯಲ್ಲಿ
ಹೋಗುವಾಗ
ದನ
ಮತ್ತು
ಅಡ್ಡ
ದಾರಿಗಳ
ಬಗ್ಗೆ
ಎಚ್ಚರ
ವಹಿಸುವುದು
ಅಗತ್ಯ.
ಬೆಂಗಳೂರಿನಲ್ಲಿ
ಸಣ್ಣ
ಗಲ್ಲಿಗಳಿಗೇನು
ಕಡಿಮೆ
ಇಲ್ಲ
ಬಿಡಿ.
ಬೆಂಗಳೂರಿನಲ್ಲಿ
ವೇಗಕ್ಕಿಂತ
ಹೆಚ್ಕ್ಚಾಗಿ
ಯಾವುದಾದರೂ
ವಾಹನ
ಬರಬಹುದೋ
ಏನೋ
ಎನ್ನುವ
ನಿರೀಕ್ಷೆ
ಬಹಳ
ಮುಖ್ಯ.
ಹಲವು
ಸಲ
ನನ್ನ
ಗೆಳೆಯರು
ಕಡಿಮೆ
ವೇಗದಲ್ಲಿಯೇ
ಹೋಗಿ
ಬಿದ್ದು
ಎದ್ದದ್ದಿದ್ದೆ :).
ಜೀವನದಲ್ಲಿ
ಬಿದ್ದವನಿಗಿಂತ
ಬೈಕಿನಿಂದ
ಬೀಳುವುದು
ಒಳಿತು
ಎನ್ನುವ
ವೇದಾಂತ
ಬಿಟ್ಟಿದ್ದು
ಇದೆ.
ಬೆಂಗಳೂರಿನಲ್ಲಿ
ರಾತ್ರಿ
ಸವಾರರದು
ಅಪಘಾತ ಕೇಳಲು
ಮಜ
ಇರುತ್ತದೆ. ಮಾರ್ಗ
ಬಹಳ
ಅಗಲವಿದೆ
ಎನ್ನುವ
ಖುಶಿಯಲ್ಲಿ ಗಾಡಿ ಓಡಿಸುವಾಗ ಲಗಾಮಿಲ್ಲದೆ ದಡಾರ್ ಅಂತ ಬಿದ್ದು
ಸ್ಟೀಲ್
ರಾಡ್
ಹಾಕಿಸಿಕೊಂಡವರಿಗೇನು
ಕಡಿಮೆ
ಇಲ್ಲ.
ಲಗಾಮಿಲ್ಲದ
ಕುದುರೆ
ಯಾವಾಗಲು
ಡೆಂಜರ್!!.
ಅಪಘಾತವಾಗಲು
ಕೇವಲ
ನಾವು
ಕಾರಣೀಭೂತರಾಗಬೇಕಿಲ್ಲ.
ನಮ್ಮ
ಎದುರಲ್ಲಿ
ಬರುವವನಿಂದಲೂ
ಆಗಬಹುದು.
ಹಾಗಾಗಿ
ಗಾಡಿಯ
ಲಗಾಮು
ಹಿಡಿದವನು
ಎಚ್ಚರದಿಂದಿರುವುದು
ಅಗತ್ಯ.
ಬಹುಶಃ
ನಾವು
ಕಲಿಯುವಾಗಲೇ
ಇಂತಹ
ವಿಷಯಗಳ
ಬಗ್ಗೆ
ಜಾಗ್ರತೆ
ವಹಿಸಿದರೆ
ಒಳಿತು
ಎನ್ನುವುದು
ನನ್ನ
ಭಾವನೆ.
ನನ್ನ
ಪತ್ನಿಗೆ
ವಾಹನ
ಬಿಡಲು
ಕಲಿಸುವಾಗ
ನಾನು "
ಡಿವೈಡರ್"
ಅಂತ
ಜೋರಾಗಿ
ಕಿರುಚುತ್ತಿದ್ದೆ.
ಈಗಲೂ
ಅವಳಿಗೆ
ಡಿವೈಡರ್
ಹತ್ತಿರ
ಹೋಗುವಾಗ
ನನ್ನ
ಮಾತು
ನೆನಪು
ಬರುತ್ತಿರುತ್ತದೆ
ಎನ್ನುತ್ತಿರುತ್ತಾಳೆ :).
ಹಾಗಾದರೂ
ನೆನಪಿದೆಯಲ್ಲ!
ಎನ್ನುವುದೇ
ನನಗಿರುವ
ನೆಮ್ಮದಿ.
ನಾನು
ಅಪಘಾತಗಳ
ಬಗ್ಗೆ
ಬರೆದೆನೆಂದು
ಕೆಲವರ
ಮನ
ನೊಂದಿರಬಹುದು.
ಓದುವವರಿಗೆ
ಎಚ್ಚರ
ಮೂಡಿಸುವುದಷ್ಟೇ
ನನ್ನ
ಈ
ಲೇಖನದ
ಗುರಿ.
ಓದುಗರಿಗೆ ವಾಹನ ತೆಗೆದುಕೊಳ್ಳದಂತೆ ಮಾಡಿ ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡುವ ಉದ್ದೇಶ ಕಂಡಿತಾ ನನ್ನಲ್ಲಿಲ್ಲ.
ಹಾಗೆ ಹೇಳುವುದಾದರೆ,
ನಾವು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗಲೂ ಅಪಘಾತವಾಗಬಹುದು.
ಆದರೆ ಅದೇ ನಮಗೆ ರಸ್ತೆಗೇ ಇಳಿಯದಂತೆ ಮಾಡಬಾರದಲ್ಲವೇ?
ಹೀಗೆ
ಹಗುರವಾಗಿ
ಹೇಳುವುದಾದರೆ
ಮತ್ತೊಂದು
ಮಾತು
ನೆನಪಿಗೆ
ಬರುತ್ತಿದೆ.
ನನ್ನ
ಕೊಲೀಗ್
ಇದ್ದವಳು
ಹೇಳುತ್ತಿದ್ದಳು:
ಸಪೂರವಾಗಿ
ಇರುವವರಿಗೆ
ಅಪಘಾತವಾದಾಗ ಅವರಿಗೆ ಜಾಸ್ತಿ ನೋವಾಗುವುದಂತೆ.
ಅದಕ್ಕೆ ನಾನು ಹೇಳಿದೆ,
ಹಾಗಾದರೆ ದಪ್ಪ ಇರುವುವರಿಗೆ
ಅಪಘಾತವಾದರೆ
ರಸ್ತೆಗೆ
ನೋವಾಗುತ್ತಾ?
ಅಂತ. !!!
"The next time you see a copy of that touching creation, take a second look. Let it be your reminder, if you still need one, that no one - no one - - ever makes it alone!"
ಅವನೊಬ್ಬನಿದ್ದ ಅಲ್ ಬ್ರೆಕ್ಟ್ ಡ್ಯೂರರ್. ವಿಶ್ವದಲ್ಲೇ ತನ್ನ ಚಿತ್ರ ಕಲೆಗೆ ಹೆಸರು ವಾಸಿಯಾಗಿದ್ದ. ಅವನು ಗತಿಸಿ ಹೋಗಿ ಸುಮಾರು ಐನೂರು ವರ್ಷಗಳಾದರೂ ಇಂದಿಗೂ ಅವನ ಕೆಲವು ಕಲೆಗಳು ಮನುಷ್ಯನಿಗೆ ಹತ್ತಿರವಾಗಿವೆ. ಅವನು ರಚಿಸಿರುವ ಹಲವು ಕಲೆಗಳಲ್ಲಿ "Praying Hands" ಹೆಸರುವಾಸಿ.
ನೂರೆಂಬರ್ಗ್ ಪಕ್ಕದ ಹಳ್ಳಿಯೊಂದರಲ್ಲಿ ಜನಿಸಿದ ಆಲ್ಬ್ರೆಕ್ಟ್ ಆವನ ಹೆತ್ತವರ ಹದಿನೆಂಟು ಮಕ್ಕಳಲ್ಲಿ ಒಬ್ಬ. ಅದೊಂದು ದಿನ ಆಲ್ಬ್ರೆಕ್ಟ್ ಮತ್ತು ಅವನ ತಮ್ಮನಿಗೆ ಚಿತ್ರಕಾರರಾಗಬೇಕೆಂಬ ಆಸೆಯಾಯಿತು. ಆದರೆ ಅವರ ಆಸೆಯನ್ನು ಕೈಗೂಡಿಸಲು ಅವರ ಅಪ್ಪನಿಗೆ ಸಾಧ್ಯವಿರಲಿಲ್ಲ. ಇಬ್ಬರಲ್ಲಿ ಒಬ್ಬರು ಪಕ್ಕದಲ್ಲಿಯೇ ಇರುವ ಮೈನಿಂಗ್ ಕಂಪೆನಿಗೆ ಹೋಗಿ ಕೆಲಸ ನಿರ್ವಹಿಸಿ ಮತ್ತೊಬ್ಬನಿಗೆ ಕಲಿಸಲು ಸಹಾಯ ಮಾಡಬೇಕಾಗಿತ್ತು. ಒಬ್ಬ ಕಲಿತ ನಂತರ ಆತ ಇನ್ನೊಬ್ಬನಿಗೆ ಕಲಿಸುವ ಮಾತು ಕೊಟ್ಟಾಗಿತ್ತು. ಇಂತಹ ಸಮಯದಲ್ಲಿ ಯಾರು ಮೊದಲೆಂದು ನಿರ್ಧರಿಸಲು ಅವರಿಬ್ಬರು ಆಯ್ದುಕೊಂಡ ಹಾದಿ "ನಾಣ್ಯ ಚಿಮ್ಮುಗೆ". ವಿಧಿ ಆಲ್ಬ್ರೆಕ್ಟ್ ನಿಗೆ ಚಿತ್ರಕಾರನಾಗುವ ಅವಕಾಶ ನೀಡಿತ್ತು.
ಮುಂದಿನ ನಾಲ್ಕು ವರ್ಷಗಳಲ್ಲಿ ಆಲ್ಬ್ರೆಕ್ಟ್ ತನ್ನ ಚಿತ್ರ ಕಲಿಕೆ ಯನ್ನು ನಡೆಸಿದರೆ, ತಮ್ಮ ಮೈನಿಂಗ್ ಕಂಪೆನಿಯಲ್ಲಿ ಕೆಲಸ ಮಾಡಿ ಅಣ್ಣನಿಗೆ ಓದಿಸುತ್ತಿದ್ದ. ಆಲ್ಬ್ರೆಕ್ಟ್ ನ ಕಲೆಗಳು ಜನ ಜನಿತ ವಾಗುತ್ತಿದ್ದವು. ಕೊನೆಗೊಂದು ದಿನ ಆಲ್ಬ್ರೆಕ್ಟ್ ತಮ್ಮನಿಗೆ ಹೇಳುತ್ತಾನೆ. "ನೀನು ನನ್ನ ದೇವರಂತಹ ತಮ್ಮ. ಈಗ ಕಲಾಕಾರನಾಗುವ ಸರದಿ ನಿನ್ನದು. ಅದಕ್ಕೆ ತಗಲುವ ಎಲ್ಲಾ ಖರ್ಚು ವೆಚ್ಛಗಳನ್ನು ಭರಿಸಲು ನಾನು ಸಿದ್ಧ" ಎಂದು.
ಈ ಮಾತನ್ನು ಕೇಳಿದ ಆಲ್ಬ್ರೆಕ್ಟ್ ನ ತಮ್ಮನಿಗೆ ಅಳು ತಡೆಯದಾಯಿತು. ಉಕ್ಕಿ ಹರಿಯುತ್ತಿದ್ದ ಕಣ್ಣೀರನ್ನು ತಡೆದುಕೊಂಡು ಹೇಳುತ್ತಾನೆ " ಅಣ್ಣ, ಇದು ನನ್ನಿಂದ ಆಗದ ಕೆಲಸ. ನನ್ನ ಸಮಯ ಆಗಿ ಬಿಟ್ಟಿದೆ. ನನ್ನ ಕೈಗಳನ್ನೊಮ್ಮೆ ನೋಡು. ಪ್ರತಿ ಬೆರಳಿನ ಮೂಳೆಗೂ ಒಂದಲ್ಲ ಒಂದು ಏಟು ಬಿದ್ದಿದೆ. ಕೈಯ ಚರ್ಮ ಕಿತ್ತು ಹರಿದಿದೆ. ನನ್ನಿಂದ ಒಂದು ಲೋಟವನ್ನು ಸರಿಯಾಗಿ ಅಲುಗಾಡದಂತೆ ಹಿಡಿಯಲಾಗುವುದಿಲ್ಲ. ಕ್ಯಾನ್ವಾಸ್ ನ ಮೇಲೆ ಹೇಗೆ ನಾಜೂಕಿನಿಂದ ಕೆಲಸ ಮಾಡಲಿ ಹೇಳು?. For me it is too late" ಎಂದು.
ಆಲ್ಬ್ರೆಕ್ಟ್ ನ portraits, ಪೆನ್, ಚಿತ್ರಗಳು, ಬೆಳ್ಳಿಯ ಚಿತ್ರಗಳು, ತಾಮ್ರದ ಚಿತ್ರಗಳು, ವಾಟರ್ ಕಲರ್, ಮಸಿ, ಮರದ ತುಂಡುಗಳು ಇತ್ಯಾದಿ ಸುಮಾರು ಐನೂರು ವರುಷಗಳು ಕಳೆದರೂ ಇಂದಿಗೂ ವಿಶ್ವದ ಹಲವು ಸಂಗ್ರಹಾಲಯಗಳಲ್ಲಿವೆ. ಹಲವು ಮಂದಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ರವಿ ವರ್ಮನ ಚಿತ್ರಗಳ ಹಾಗೆ ಮನೆ, ಆಫೀಸಿನ ಕೋಣೆಯಲ್ಲಿ ಈತನ ಕಲೆಗಳನ್ನು ನೇತು ಹಾಕಿದ್ದಾರೆ. ಒಂದು ದಿನ ತನ್ನ ತಮ್ಮ ಮಾಡಿದ ತ್ಯಾಗ ಮತ್ತು ತೋರಿಸಿದ ಪ್ರೀತಿಗಾಗಿ ತನ್ನ ತಮ್ಮನ ಕೈಗಳನ್ನು ಪ್ರಾರ್ಥಿಸುವ ರೂಪದಲ್ಲಿ ಬರೆದು "Hands" ಎನ್ನುವ ಹೆಸರಿಡುತ್ತಾನೆ ಆಲ್ಬ್ರೆಕ್ಟ್. ಆ ಕೈ ಮತ್ತು ಅದರ ಹಿಂದಿನ ಕಥೆಯನ್ನು ಕೇಳಿದ ಜನ "Praying Hands" ಎನ್ನುವ ಹೆಸರಿಡುತ್ತಾರೆ.
ಆಲ್ಬ್ರೆಕ್ಟ್ ನ ತಮ್ಮ ನಮಗೆ ನಿಮಗೆಲ್ಲರಿಗೂ ತ್ಯಾಗ ಮತ್ತು ಪ್ರೀತಿಗೊಂದು ಆದರ್ಶ. ಇಂದು ಅವನ ತಮ್ಮನ ಹೆಸರು ತಿಳಿದವರು ಕಡಿಮೆ. ಕೆಲವರು ಆಲ್ಬರ್ಟ್ ಎನ್ನುತ್ತಾರೆ. ಇನ್ನು ಕೆಲವರು ಇನ್ನೇನೋ ಹೇಳುತ್ತಾರೆ. ಆದರೆ ಅವನು ಮಾಡಿದ ತ್ಯಾಗ ಮತ್ತು ನೀಡಿದ ಪ್ರೀತಿ "Praying Hands" ಆಗಿ ಇಂದಿಗೂ ವಿಶ್ವದ ಮುಂದಿದೆ.