ಹೀಗೆ ಹೊರಗಡೆ ನಡೆಯುತ್ತಿರುವಾಗ ಭಿಕ್ಷುಕನೊಬ್ಬ ಸಿಕ್ಕಿದ. ಭಿಕ್ಷೆ ಬೇಡುವವರು ಹಿಂದೆ "ಧರ್ಮ ಕೊಡಿ" ಅಂತ ಹೇಳುತ್ತಿದ್ದರು. ಯಾಕೆ ಅಂದರೆ ಅವರವರ ಧರ್ಮವನ್ನು ಕಾಪಾಡುವುದು ಅವರವರ ಕರ್ತವ್ಯ. ನಿಮ್ಮ ಕರ್ತವ್ಯ ಮಾಡಿ ಎನ್ನುವುದಕ್ಕಾಗಿ ಧರ್ಮ ಎನ್ನುವ ಪರಿಪಾಟವಿತ್ತು. ಈಗ ಕೊಡಣ್ಣ ಎನ್ನುವವರೆಗೆ ಬಂದಿದೆ. ಮುಂದೇನೋ ಗೊತ್ತಿಲ್ಲ. ಹಾಗೆ ಕೆಲವು ಪ್ರಶ್ನೆಗಳು ನನ್ನ ಮನಃ ಪಟಲ ದಲ್ಲಿ ಹಾಡು ಹೋದವು ನೋಡಿ. ಅದಕ್ಕೊಂದು ತರಲೆ ಉತ್ತರವೂ ಹೊಳೆದು ಬಿಡುವುದೇ !!
ಕೂತಲ್ಲೇ ಹಣ ಬರಬೇಕಿದ್ದರೆ ಏನು ಮಾಡಬೇಕು?
ಕೂತಲ್ಲೇ ಕೈ ಚಾಚಿ ಭಿಕ್ಷೆ ಬೇಡಬೇಕು.
ಲೋನಿಗು ಭಿಕ್ಷೆಗೂ ಏನು ವ್ಯತ್ಯಾಸ?
ಲೋನು ಕೊಟ್ಟವರು ಕೆಲವೇ ದಿನಗಳಲ್ಲಿ ಅಟ್ಟಿಸಿಕೊಂಡು ಬರುತ್ತಾರೆ. ಒಮ್ಮೆ ಭಿಕ್ಷೆ ಕೊಟ್ಟವರು ಮತ್ತೊಮ್ಮೆ ತಿರುಗಿಯೂ ನೋಡುವುದಿಲ್ಲ
ಛತ್ರದಲ್ಲಿ ಬಿಟ್ಟಿ ಊಟ ಮಾಡುವುದಕ್ಕೂ ಭಿಕ್ಷೆ ಊಟಕ್ಕೂ ಏನು ವ್ಯತ್ಯಾಸ?
ಬಿಟ್ಟಿ ಊಟ ಮಾಡಿದವನಿಗೆ ಹಾಲು ಅನ್ನ; ಭಿಕ್ಷೆ ಎತ್ತಿದವನಿಗೆ ತಂಗಳನ್ನ.
Subscribe to:
Post Comments (Atom)
5 comments:
ತುಂಬ ಚೆನ್ನಾಗಿದೇರಿ!
Thank you sir :)
chennaagide !
very nice!!
very nice!!
Post a Comment