Wednesday, November 19, 2008

ಹಾರುತಿಹುದು ನೋಡಾ ನಮ್ಮ ಕನ್ನಡದ ಬಾವುಟ.

ನಾನು ಹೀಗೆ ಕಂಪೆನಿಯ ಕ್ಯಾಂಟೀನ್ ನಲ್ಲಿ ಪ್ರತಿ ದಿನದಂತೆ ಆವತ್ತು ಕೂಡ ತಿನ್ನಲು ಹೊರಟಿದ್ದೆ.
ಆ ದಿನ ಮೂರನೆಯ ತಾರೀಖು, ಸೋಮವಾರ.
ಆಗ ನೋಡಿ ಕಂಡಿತು ನಮ್ಮ ಕನ್ನಡದ ಬಾವುಟ. ಖುಷಿಯಿಂದ ಮನಸ್ಸು ಪುಟ್ಟ ಮಗುವಿನಂತಾಗಿತ್ತು.
ಓಡಿ ಹೋದೆ. ಬಾವುಟದ ಪಕ್ಕ ನಿಂತು ಕಂಪೆನಿಯ ಹೆಸರು ಬರುವ ಹಾಗೆ ಕ್ಲಿಕ್ಕಿಸಿದೆ.
ಕಂಪೆನಿಯವರಿಗೆ ಕನ್ನಡದ ಮೇಲೆ ಗೌರವವಿತ್ತಾ? ಅಥವಾ ಕನ್ನಡಿಗರ ಬಗ್ಗೆ ಹೆದರಿಕೆ ಇತ್ತಾ?...
ಗೊತ್ತಾಗಲಿಲ್ಲ.