Tuesday, September 25, 2007

ಇಂಪಾದ ಧ್ವನಿ ಕೇಳಬೇಕೆ?

“ಆ ಬೆಲ್ಟ್ ಅನ್ನು ತೆಗಿ, ಇನ್ನು ಮುಂದೆ ಅಮ್ಮನೆ ಆ ಬೆಲ್ಟ್ ಅನ್ನು ನಿನಗೆ ಹಾಕಬೇಕು” ಎಂದು ಕೋಪದಿಂದ ಹೇಳಿದೆ ಅವನಿಗೆ. ಅವನ ಆ ಪುಟ್ಟ ಕಣ್ಣುಗಳಲ್ಲಿ ಆಗ ನನಗೆ ಕಾಣಲು ಸಿಕ್ಕಿದ್ದು ಒಂದು ಸಣ್ಣನೆಯ ಭಯ. ತಾನು ಏನೋ ತಪ್ಪು ಮಾಡಿದ್ದೇನೆ ಎನ್ನುವ ಆತಂಕ. ಮಾವನಿಗೆ ಏನೋ ಕೋಪ ಬಂದಿದೆ ಎನ್ನುವ ಯೋಚನೆ, ಜೊತೆಗೆ ಬೆಲ್ಟ್ ಅನ್ನು ಹಾಕಿಯೇ ಬಿಡಬೇಕೆನ್ನುವ ಹಂಬಲ. ನನ್ನ ಮಾತನ್ನು ಕೇಳಿಯೂ ಕೂಡ ಆತ ತನ್ನ ಕೆಲಸವನ್ನು ಮುಂದುವರೆಸಿದ. ಹೌದು, ನಾನು ಹೇಳಲು ಹೊರಟಿರುವುದು ನನ್ನ ಅಕ್ಕನ ಮಗ “ಸಮರ್ಥ್” ಬಗ್ಗೆ.

ಈ ನನ್ನ ಅಳಿಯನ ತುಂಟತನ ಎಂತಹ ತಾಳ್ಮೆ ಇರುವವರಿಗೂ ಒಂದು ಸವಾಲು. ಅವನ ಜೊತೆಗೆ ಇದ್ದಾಗಲೆಲ್ಲ ನಾನು ನನಗೆ ಹೇಳಿಕೊಳ್ಳುತ್ತಿರುತ್ತೇನೆ, “ತಾಳ್ಮೆ, ತಾಳ್ಮೆ” ಎಂದು. ಆದರೆ ಏಕೋ ಗೊತ್ತಿಲ್ಲ, ಅವನ ತುಂಟತನ ನೋಡಿದಾಗ ನನ್ನ ತಾಳ್ಮೆಯೇ ಎಲ್ಲೋ ಅಡಗಿ ಕುಳಿತಿರುತ್ತದೆ. ನಾನು ಸಿಡುಕಿದ ತಕ್ಷಣ ನನಗೆ ನನ್ನ ಬಗ್ಗೆಯೇ ಒಂದು ನಗುವನ್ನು ಬರುವ ಹಾಗೆ ಮಾಡುತ್ತದೆ.

ಇತ್ತೀಚೆಗೆ ನಾನು ಅವನಿಗೊಂದು ಬೆಲ್ಟ್ ತೆಗೆಸಿಕೊಟ್ಟಿದ್ದೆ. ಅದು adjustable ಬೆಲ್ಟ್. ಹಿಂದೆ ಒಂದು ಬೆಲ್ಟ್ ಇತ್ತಂತೆ. ಅದು normal ಬೆಲ್ಟ್; ಅದನ್ನು ಹಾಕುವ ಉತ್ಸಾಹದಲ್ಲಿ ಎರಡೇ ದಿನದಲ್ಲಿ ಆ ಬೆಲ್ಟ್ ಅನ್ನು ತುಂಡು ಮಾಡಿ ಬಿಟ್ಟಿದ್ದನಂತೆ. ಆದರೆ ನನ್ನ ಅಕ್ಕನಿಗೆ ತನ್ನ ಮಗನಿಗೊಂದು ಬೆಲ್ಟ್ ಹಾಕಬೇಕೆನ್ನುವ ಆಸೆ. ಹಾಗಾಗಿ ನನ್ನಲ್ಲಿ ಅವನಿಗೊಂದು ಬೆಲ್ಟ್ ತೆಗೆಸಿಕೊಡಲು ಹೇಳಿದ್ದಳು. ನಾನು ಬೆಲ್ಟ್ ಕೊಡಿಸಿದ್ದೇ ತಡ, ಈ ಬೆಲ್ಟ್ ಅನ್ನು ಕೂಡ ತೆಗೆಯುವುದು ಹಾಕುವುದಕ್ಕೆ ಶುರುವಿಟ್ಟುಕೊಂಡನಲ್ಲ ಈ ಪುಣ್ಯಾತ್ಮ. ಇವನು ಯಾವಾಗ ಇದಕ್ಕೂ ಒಂದು ಒಂದು ಗತಿ ಕಾಣಿಸುತ್ತಾನೋ ಎನ್ನುವ ಆತಂಕ ನನಗೆ. ಒಂದೆರಡು ಸಲ ಹಾಕಿ ತೋರಿಸಿದೆ. ಸಮಾಧಾನ ಆಯಿತು ಅನಿಸುತ್ತದೆ, ಬದಿಗೆ ಇಟ್ಟ. ಇಟ್ಟು ಐದು ನಿಮಿಷ ಮುಗಿದಿಲ್ಲ, ಮತ್ತೆ ಅದೇ ಆಟ. ಈ ಸಲ ನನಗೆ ಎಲ್ಲಿತ್ತೋ ಕೋಪ? ರೇಗಿಯೇಬಿಟ್ಟೆ. ಆದರೂ ಅವನು ಬಿಡಲಿಲ್ಲ ನೋಡಿ. ನನಗೆ ಬೆನ್ನು ಹಾಕಿ ಬೆಲ್ಟ್ ಹಾಕಲು ಶುರು ಮಾಡಿದ. ರೇಗಿದ ಮೇಲೆ ನನಗೆ ಅನಿಸಿತು. ನನ್ನದೇನಿದ್ದರೂ ಪುಗಸಟ್ಟೆ ಕೋಪ, ಇಂಥವನಲ್ಲಿ ತೋರಿಸುವುದಕ್ಕೆ ಸರಿ. ಅದಕ್ಕೆ ಅವನೂ ಬೆಲೆ ಕೊಡುವುದಿಲ್ಲ ಅಂತ. ಆದರೆ ನನಗೆ ಅವನಲ್ಲಿ ತುಂಬಾ ಇಷ್ಟವಾಗಿದ್ದು ಏನೆಂದರೆ, ತಾನೇ ಕಲಿಯಬೇಕೆಂಬ ಛಲ. ಆ ಛಲ ಇರಬೇಕು ಮಕ್ಕಳಿಗೆ. ಅದನ್ನು ಮುರುಟಿ ಹಾಕುವ ಕೆಲಸ ನಾವು ಮಾಡಬಾರದು. ತಾನೇ ಬೆಲ್ಟ್ ಹಾಕಲು ಕಲಿಯಬೇಕೆಂಬ ಅವನ ಛಲ ಸರಿಯೇ. ಆದರೆ ನನಗೆ ಮುರಿದು ಹೋದರೆ ಎನ್ನುವ ಆತಂಕ. ಇತ್ತೀಚೆಗೆ ಎಸ್. ಎಮ್. ಎಸ್. ಮಾಡಲು ಪ್ರಾರಂಭಿಸಿದ್ದಾನೆ. ನನಗೆ ಅವನ ಉತ್ಸಾಹ ಕುಂಠಿತಗೊಳಿಸುವ ಮನಸ್ಸಿಲ್ಲ. ಹಾಗಾಗಿ ನನ್ನ ಹಣ ಪೋಲಾದರೂ ಎಸ್. ಎಮ್. ಎಸ್. ಮಾಡುತ್ತಿರುತ್ತೇನೆ.

ನನಗೆ ಮತ್ತು ಅವನಿಗೆ ತುಂಬಾ ಸಾಮ್ಯತೆ ಇದೆ. ಅವನು ಹುಟ್ಟಿರುವುದು ನನ್ನ ಜನ್ಮದಿನವಾದ ಜುಲೈ ಒಂದರಂದು. ನಾನು ಕೂಡ ಸಣ್ಣವನಿರುವಾಗ ತಲೆಹರಟೆ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಈಗಲೂ ಕಡಿಮೆ ಆಗಿಲ್ಲ ಅಂತೀರಾ?. ಅವನು ಕೂಡ ತಲೆ ಬುಡ ಇಲ್ಲದ ಪ್ರಶ್ನೆಗಳನ್ನು ಕೇಳುತ್ತಿರುತ್ತಾನೆ. ನನಗೂ ಸಣ್ಣವನಿರುವಾಗ ನಾಣ್ಯಗಳನ್ನು ಕೂಡಿಡುವ ಅಭ್ಯಾಸವಿತ್ತು. ಇವನಿಗೂ ಆ ಅಭ್ಯಾಸವಿದೆ. ನನ್ನ ಅಕ್ಕನಲ್ಲಿ ಕೇಳಿದರೆ, ಇಂತಹ ಅನೇಕ ಹೋಲಿಕೆಗಳನ್ನು ಮಾಡುತ್ತಾ ಹೋಗುತ್ತಾಳೆ. “ನನಗೆ ನೀನೆ ನೆನಪಾಗುತ್ತಿರುತ್ತಿಯ ಇವನ ಚೇಷ್ಟೆ ನೋಡಿದಾಗ” ಎನ್ನುತ್ತಿರುತ್ತಾಳೆ. ಅವಳೇನಿದ್ದರೂ ಹಾಗೆ, ಎಲ್ಲವನ್ನು ರವಿಗೆ ಹೋಲಿಸಿದಾಗಲೇ ಅವಳ ಮನಸ್ಸಿಗೆ ಸಮಾಧಾನ.


ನಾನು ನನ್ನ ಅಳಿಯನ ಬಗ್ಗೆ ಹೇಳಲು ಹೊರಟಾಗ ಅವನು ತಂದಿಟ್ಟ ಅವಾಂತರದ ಬಗ್ಗೆ ಹೇಳಲೇಬೇಕು. ಒಂದು ದಿನ ನಾನು ನನ್ನ ಅಕ್ಕನ ಸಂಸಾರದ ಜೊತೆಗೆ ಒಂದು ಪೂಜೆಗೆ ಹೋಗಿದ್ದೆ. ಅಲ್ಲಿ ಪೂಜೆ ಮುಗಿದು ಎಲ್ಲರೂ ಊಟಕ್ಕೆ ಕುಳಿತಿದ್ದರು. ನಾನು ಎಂದಿನಂತೆ ಬಡಿಸುತ್ತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ನನ್ನ ಅಳಿಯನಿಗೆ ನಂ 2 ಬಂದು ಬಿಟ್ಟಿದೆ. ನನ್ನ ಗೆಳೆಯರು ಯಾವಾಗಲೂ “ಅಳಿಯ” ಅಂದಾಗಲೆಲ್ಲ “ಮಾಮ .. ಮಾಮ … ಆಯ್ತು” ಅಂತ ಹೇಳುತ್ತಿರುತ್ತಾರೆ. ಸರಿಯಾಗಿ ಇವನಿಗೆ “ವಿಜಯದ ಸಂಕೇತ” ಬಂದೆ ಬಿಟ್ಟಿತಲ್ಲ ಎನ್ನುವ ಚಿಂತೆಯಾಯಿತು ನನಗೆ. ಸರಿ, ಎಂದು ಕರೆದುಕೊಂಡು ಹೋಗಿ ಎಲ್ಲ “clean” ಮಾಡಿ ಕರೆದುಕೊಂಡು ಬಂದೆ. ಅದನ್ನು ನೋಡಿದ ಕೆಲವು ಅಮ್ಮಂದಿರಿಗೆ ಒಳಗೊಳಗೇ ಏನೋ jealousy ಆಯಿತು ನೋಡಿ. ಇವನು ನಮ್ಮ ಸಹಾಯ ಕೇಳಲೆ ಇಲ್ಲವಲ್ಲ ಅಂತ ಇರಬೇಕು. ಅಥವಾ ಅವರ ಗಂಡಂದಿರು ಇಂತಹ ಘನ ಕಾರ್ಯವನ್ನು ಮಾಡಿಯೇ ಇಲ್ಲ ಅನಿಸುತ್ತದೆ. ನಾನು ಬಂದಾಗ ಕೇಳಿದರು “ಅದು ಹೇಗೊ clean ಮಾಡಿದೆ?” ಅಂತ. ಅವರಿಗೆ ಹೇಳಿದೆ, “ನೀವು ರಜನೀಕಾಂತ್ ಚಲನ ಚಿತ್ರ ನೋಡಿದ್ದೀರಾ? ಹೇಗೆ ಕೈ ತಿರುಗಿಸುತ್ತಾನೆ? ಅಂತ. ಅವನ ಸಿನೆಮಾ ಒಂದು ಸಲ ನೋಡಿದರೆ ಸಾಕು. ಈ ಕೆಲಸ ಸಲೀಸು“ ಎಂದೆ. ಉತ್ತರ ಕೇಳಿದ ಎಲ್ಲ ಅಮ್ಮಂದಿರು ಅಲ್ಲೇ ಸುಸ್ತಾಗಿ ಬಿಟ್ಟರಲ್ಲ. ಆಗ ಬಂತು ನೋಡಿ ಅಲ್ಲಿದ್ದ ಒಬ್ಬ ಅಕ್ಕನ ಪಿ.ಜೆ. “ ನಿನಗೆ ಕೈ ತೊಳೆಯಲು ಸೋಪ್ ಬೇಕಾಗಿಲ್ಲ ಅಲ್ವಾ?” ಅಂತ. ಅದನ್ನು ಕೇಳಿದ ನನಗೆ shock. ಯಾಕೆಂದರೆ ನಾನು ಚಿಕ್ಕಂದಿನಿಂದಲೂ ಒಂದು ರೀತಿಯಲ್ಲಿ ಮಡ್ ಸನ್. ಮನೆಗೆ ಬಂದು ೧೫ ನಿಮಿಷವಾದರೂ ಕಾಲು ತೊಳೆಯದೆ ಓಡಾಡಿಕೊಂಡಿರುತ್ತೇನೆ. ಅಮ್ಮನಿಂದ ಬೈಸಿಕೊಂಡಾಗಲೇ ಜ್ನಾನ ಕಾಲಿನ ಕಡೆಗೆ ಹೊರಳುವುದು. ಹಾಗಾಗಿ ನನ್ನ ಹಣೆಬರಹವೇನಾದರೂ ಇವಳಿಗೆ ಗೊತ್ತಾಯಿತೆ? ಎಂಬ ಆತಂಕದಿಂದ ಅವಳನ್ನು ಕೇಳಿದೆ. “ಯಾಕೆ ಹೇಳಿದೆ ನೀನು ಅಂತ ಗೊತ್ತಾಗಲಿಲ್ಲ” ಅಂತ. ಅದಕ್ಕೆ ಅವಳಿಂದ ಬಂದ ಉತ್ತರ “ ನೀನು ಸೋಪ್ಟ್ ವೇರ್ ಇಂಜಿನಿಯರ್ ಅಲ್ವಾ?” ಅಂತ. ಅದನ್ನು ಕೇಳಿದ ನಾನು ಅಲ್ಲೇ ಸುಸ್ತಾಗಿ ಬಿಟ್ಟೆ.

ಇಂತಹ ಕೋಟಿ ತಂಟೆ, ಅವಾಂತರಗಳನ್ನು ತಂದಿಡುವ ಅಳಿಯನೊಬ್ಬ ನನಗಿದ್ದಾನೆ ಎಂದು ಹೇಳುವುದರಲ್ಲಿ ನನಗೊಂದು ಸಂತೋಷವಿದೆ. ಇದನ್ನು ಓದಿದ ನಿಮಗೂ ಇಂತಹ ಪುಟ್ಟ ಮಗು ನಿಮಗೆ ತಂಟೆ ಮಾಡಿದ ನೆನಪು ಬಂದಿರಬಹುದು. ಅಂದ ಹಾಗೆ ನಿಮಗೂ “….. ಆಯ್ತು” ಎನ್ನುವ ಇಂಪಾದ ಧ್ವನಿ ಕೇಳುವ ಸೌಭಾಗ್ಯ ಬರಲಿ. ಆ ಇಂಪಾದ ಧ್ವನಿ ಕೇಳಿ ನಿಮ್ಮ ಕೈ ತಂಪಾಗಲಿ. ಒಂದು ವೇಳೆ ಈಗಾಗಲೆ ಈ ಧ್ವನಿ ಕೇಳಿದ್ದರೆ, ನಿಮಗೆ Congrats !!!. ನೀವು ನಮ್ಮದೇ route ನಲ್ಲಿ ಇದ್ದೀರ ಬಿಡಿ.

Thursday, August 30, 2007

Comfort ಹೆಸರಿನಲ್ಲಿ Culture ಕೆಡಿಸುವವರ ಕುರಿತು…

“Do not believe in anything simply because you have heard it. Do not believe in anything simply because it is spoken and rumored by many. Do not believe in anything simply because it is found written in your religious books. Do not believe in anything merely on the authority of your teachers and elders. Do not believe in traditions because they have been handed down for many generations. But after observation and analysis, when you find that anything agrees with reason and is conducive to the good and benefit of one and all, then accept it and live up to it.” — Buddha
ನಾನು ಈಗ ಹೇಳಲು ಹೊರಟಿರುವುದು ಸುಖಾ ಸುಮ್ಮನೆ ಮಹಿಳಾ ದೌರ್ಜನ್ಯದ ಕುರಿತು ಕಿವಿ ಕಚ್ಚುವವರ ಬಗ್ಗೆ. ಹುಡುಗಿಯರ ಬಟ್ಟೆಯ ಬಗ್ಗೆ ಹೇಳಿದಾಗ ನನ್ನ comfort ಹಾಕಿಕೊಳ್ಳುತ್ತೇನೆ ಎಂದು ಎದೆಗಾರಿಕೆಯಿಂದ ಉತ್ತರಿಸುವವರ ಬಗ್ಗೆ. ಇಂಥವರ ಒಂದು ಮೆಂಟಾಲಿಟಿಯ ಬಗ್ಗೆ ಒಂದು ಲೇಖನ.

ನಾನು ಇತ್ತೀಚೆಗೆ ಒಂದು ಹುಡುಗಿಯ ಜೊತೆ ನನ್ನ ಹೊಸ ಹವ್ಯಾಸದ ಬಗ್ಗೆ ಹೇಳುತ್ತಿದ್ದೆ. ನನ್ನ ಹವ್ಯಾಸದಲ್ಲಿ ಯಾವಾಗಲು ಒಂದು ತಿಕ್ಕಲುತನವಿರುತ್ತದೆ. ಈ ಹವ್ಯಾಸ ಏನಂದರೆ, ನಾನು ನನ್ನ ಕಂಪೆನಿ ವಾಹನದಲ್ಲಿ ಬರುವಾಗ ಕಂಪೆನಿಯ ಪಕ್ಕ ರಸ್ತೆ ಬದಿಯಲ್ಲಿ ಆರ್. ವಿ. ಕಾಲೇಜಿನ ಹುಡುಗಿಯರು ಹೋಗುತ್ತಿರುತ್ತಾರೆ. ಆ ಹುಡುಗಿಯರಲ್ಲಿ ಚೂಡಿದಾರ್ ಎಷ್ಟು ಜನ ಹಾಕಿಕೊಂಡಿದ್ದಾರೆ? ಎಷ್ಟು ಜನ ಹಾಕಿಕೊಂಡಿಲ್ಲ ಎಂಬುದನ್ನು ಲೆಕ್ಕ ಹಾಕುವುದು ಮತ್ತು ಇವೆರಡರ percentage ಲೆಕ್ಕ ಮಾಡುವುದು. ಲೆಕ್ಕ ಸಿಕ್ಕಿದಾಗ, ಚೂಡಿದಾರ್ ಹಾಕಿದವರು ೨೦% ಮಾತ್ರ. ಇದರಿಂದ ನಮ್ಮ ಸಂಸ್ಕ್ರ್ ತಿ ಎತ್ತ ಸಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ೨೦೫೦ ರ developed India ಅನ್ನುವುದು ಬಹುಶಃ ನಮ್ಮ ಬಟ್ಟೆ ಬಿಟ್ಟಿರುವುದರಲ್ಲಿ ಮಾತ್ರ ಇರುತ್ತದೆ ಎನ್ನುವುದು ನನ್ನ ಅನಿಸಿಕೆ.

ನನ್ನ ಹವ್ಯಾಸದ ಬಗ್ಗೆ ಹೇಳಿದ್ದೆ ತಡ, “Idle mind is Devil's workshop.” ಅಂತ ನನ್ನನ್ನೆ ಡೆವಿಲ್ ಮಾಡಿಯೇ ಬಿಟ್ಟಳು ಹುಡುಗಿ. ಅದಲ್ಲದೆ, ಪ್ರಶ್ನೆಗಳ ಸುರಿಮಳೆ ಬೇರೆ. “ನೀವು ಯಾಕೆ ಹುಡುಗಿಯರ ಬಟ್ಟೆ ಹಿಂದೆ ಬಿದ್ದಿದ್ದೀರ? ನಮಗೆ comfort ಸಿಗತ್ತೆ ಪ್ಯಾಂಟ್ ಟಿ ಶರ್ಟ್ ಗಳನ್ನು ಧರಿಸುವುದರಿಂದ. ಕಲ್ಚರ್ ಬಗ್ಗೆ ಹೇಳಲು ಗಂಡಸರು ಯಾರು? ನೀವು User Interface ಬಿಟ್ಟು ಯಾಕೆ ಒಳಗಡೆ ಏನಿದೆ ಅಂತ ನೋಡುವುದಿಲ್ಲ? ನೀವು ಯಾಕೆ ಆಫೀಸಿಗೆ ಧೋತಿ ಉಟ್ಟುಕೊಂಡು ಬರುವುದಿಲ್ಲ? ಅವರವರ ಬಟ್ಟೆಯ ಬಗ್ಗೆ ಅವರವರಿಗೆ ಸ್ವಂತ ಅಧಿಕಾರ ಇದೆ. ಇಷ್ಟೆಲ್ಲ ಯಾಕೆ ಹೇಳುತ್ತೀರಿ ಅಂದರೆ ನಿಮಗೆ competition ಬಗ್ಗೆ ಹೆದರಿಕೆ. ತಾವೇ dominate ಮಾಡಬೇಕೆಂಬ ಆಸೆ. ಇಷ್ಟೆಲ್ಲ ಮಾಡುವ ನೀವು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾ ಇದ್ದೀರಿ” ಎಂದು ಬಿಟ್ಟಳು.

ಇದು ಸುಮ್ಮನಿರಲಾಗದೆ ಇರುವೆ ಬಿಟ್ಟುಕೊಂಡ ಪರಿಸ್ಥಿತಿಗೆ ಬಂದಂತಾಗಿತ್ತು ನನ್ನ ಸ್ಥಿತಿ. “ಅವರವರ ಬಟ್ಟೆಯ ಬಗ್ಗೆ ಅವರವರಿಗೆ ಸ್ವಂತ ಅಧಿಕಾರ ಇದೆ” ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಅಧಿಕಾರ ಇದೆ ಅಂತ ಅಧಿಕಾರದ ದುರುಪಯೋಗ ಆಗಬಾರದಲ್ವೆ? ಅಂತಹ ಕೆಲಸ ಆದಾಗ ಅದನ್ನು ಪ್ರಶ್ನಿಸುವುದು ತಪ್ಪೇ? ಎನ್ನುವುದನ್ನು ನಾವು ಅವಲೋಕಿಸಬೇಕು. ಆಮೇಲೆ User Interface ಎನ್ನುವುದು ಒಂದು ಅತಿ ಮುಖ್ಯವಾದ ವಿಷಯ. ಒಂದು ಪ್ರಾಡಕ್ಟ್ ಎಷ್ಟೆ ಚೆನ್ನಾಗಿರಲಿ User Interface ಸರಿ ಇಲ್ಲದಿದ್ದರೆ “ಸರಿ ಇಲ್ಲ” ಎಂದು ಹೇಳುವವರೆ ಹೆಚ್ಚು. ಯಾಕೆಂದರೆ ಎಲ್ಲರಿಗೂ User Interface ಮೇಲೆಯೇ ಕಣ್ಣು ಹೊರತು ಒಳಗಡೆ ಏನಿದೆ ಎಂದು ಅಲ್ಲ. ಒಳಗಡೆ ಏನಿದೆ? ಎಂದು ನೋಡುವುದು ಏನಿದ್ದರೂ ಮುಂದಿನ ಹಂತ. ಇನ್ನು ಧೋತಿ ಯಾಕೆ ಆಫೀಸಿಗೆ ಉಡುವುದಿಲ್ಲ? ಎಂದರೆ ಅಲ್ಲಿ dress code ಇದೆ.

ಇನ್ನು ಕಲ್ಚರ್ ಬಗ್ಗೆ ಹೇಳಲು ಗಂಡಸರು ಯಾರು? ಎನ್ನುವುದು ಒಂದು ಉತ್ತಮವಾದ ಪ್ರಶ್ನೆಯೇ. ಆದರೆ ನಾವು ಯಾವುದು ಸರಿ ಮತ್ತು ಯಾವುದು ತಪ್ಪು ಎನ್ನುವುದನ್ನು ಹೇಳ ಹೊರಟಿದ್ದೇವೆ ಅಷ್ಟೆ. ಭಾರತೀಯ ಮಹಿಳೆಯರಿಗೆ ಬುದ್ಧಿವಂತಿಕೆಯಿದೆ. ಮೇಲೆ ಬರುವ ವಿಶ್ವಾಸವಿದೆ. ಅದಕ್ಕೆ ಪಾಶ್ಚಾತ್ಯ ಸರಕನ್ನು ತಂದು ಕಟ್ಟಬೇಕಾಗಿಲ್ಲ. ನನ್ನ ಪ್ರಕಾರ ಯಾವುದೇ ಹೆಜ್ಜೆ ಇಟ್ಟಾಗಲು ನಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ? ಎನ್ನುವುದನ್ನು ಚಿಂತಿಸಬೇಕು. ಒಂದು ವೇಳೆ ಕಳೆದುಕೊಳ್ಳುವ ವಿಷಯವಿದ್ದರೆ, ಏನನ್ನು ಗಳಿಸಲು ಕಳೆದುಕೊಳ್ಳುತ್ತಿದ್ದೇವೆ? ಎಂಬುದರ ಅರಿವಿರಬೇಕು. ಇಂತಹ ವಿಷಯದಲ್ಲಿ ಗಳಿಸುವುದು ಏನೂ ಇಲ್ಲ. ಮತ್ಯಾಕೆ ನಮ್ಮ ವಸ್ತುಗಳ ಬಗ್ಗೆ ತಾತ್ಸಾರ? ಎನ್ನುವುದೆ ಅರ್ಥವಾಗದೆ ಇರುವ ಒಂದು ಪ್ರಶ್ನೆ. Jim Rohn ಒಂದು ಮಾತು ಹೇಳಿದ್ದಾನೆ. “If someone is going down the wrong road, he doesn’t need motivation to speed him up; what he needs is education to turn him around” ಅಂತ. ನನಗೂ ಹಾಗೆಯೇ ಅನಿಸುತ್ತದೆ. ನಮಗೆ ಇಂದು ಸರಿಯಾದ ಶಿಕ್ಷಣದ ಅಗತ್ಯವಿದೆ.

ಇನ್ನು ಗಂಡಸರು domination ಮತ್ತು competition ಗೆ ಹೆದರಿದ್ದಾರೆ ಎಂದರೆ ಅದೊಂದು ಜೋಕ್. ಸ್ವಲ್ಪ ಮಟ್ಟಿಗೆ ಕೆಲವು ಕಡೆ ಇದೆ ಒಪ್ಪುತ್ತೇನೆ. ಆದರೆ ಎಲ್ಲಾಕಡೆ ಅದೇ ರಾಗ ಅದೇ ಹಾಡು ಸರಿ ಹೋಗುವುದಿಲ್ಲ. ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನ ಕಲ್ಪಿಸಿಕೊಡುವುದರಲ್ಲಿ ಗಂಡಿನ ಪಾತ್ರ ಕೂಡ ಇದೆ. ಎಷ್ಟೆ ಕಷ್ಟವಾದರೂ ಸರಿ; reservation ಕೊಡಿ ಎಂದು ಸರಕಾರದ ಮುಂದೆ ಅಂಗಲಾಚಿಲ್ಲ. ಬಸ್ ಸೀಟಿನಲ್ಲಿ reservation ಬೇಕು ಎಂದು ಎಲ್ಲೂ ಹೇಳಿಲ್ಲ. Women oriented policies ಬಂದಾಗ ಇರಲಿ ಬಿಡು ನಮ್ಮವರೆ ಎಂದು ಸುಮ್ಮನಿದ್ದಾರೆ. ಇದು ಗಂಡಿನ ಸ್ವಾಭಿಮಾನವನ್ನು ಸೂಚಿಸುತ್ತದೆ. ಗಂಡು ಹೆಣ್ಣು ಸಮಾನ ಎನ್ನುವವರು reservation ವಿಷಯ ಬಂದಾಗ ತುಟಿ ಪಿಟಕ್ಕೆನ್ನದೆ ಸುಮ್ಮನಿರುತ್ತಾರೆ. ಯಾಕೆಂದರೆ ಅದರಿಂದ ಅವರಿಗೆ ಅನುಕೂಲ ಇದೆ. ಹೇಗೆ ಹೇಳುತ್ತಾರೆ? ಅಲ್ವೆ?

ಇನ್ನು "comfort ಸಿಗುತ್ತದೆ ಆ ಬಟ್ಟೆಗಳಲ್ಲಿ” ಎನ್ನುವ ವಿಷಯಕ್ಕೆ ಬರೋಣ. ಹಿಟ್ಲರ್ ಒಂದು ಮಾತು ಹೇಳಿದ್ದಾನೆ. "What luck for rulers, that men do not think" ಅಂತ. ಸಮಾಜ ಸರಿಯಾಗಿ ಚಿಂತಿಸುವುದಿಲ್ಲ ಎಂದು “ಹೇಳಿದ್ದೆ ಮಾತು; ಆಡಿದ್ದೆ ಆಟ”. ನಾನು ನನ್ನ ಸುತ್ತ ಮುತ್ತ ಇರುವ ಹುಡುಗಿಯರಲ್ಲಿ ಗಮನಿಸಿದ್ದೇನೆ. ಟಿ ಶರ್ಟ್ ಹಾಕಿಕೊಂಡು ಬರುತ್ತಾರೆ. ಆದರೆ ನೇರವಾಗಿ ನಿಂತಾಗ ಮುಂದುಗಡೆ, ಬಗ್ಗಿದಾಗ ಹಿಂದುಗಡೆ ಎಳೆದುಕೊಳ್ಳುತ್ತಿರುತ್ತಾರೆ. ಇದು comfort? ಅದಕ್ಕೇ ಹೇಳುವುದು. “Actions speak more than words” ಅಂತ. ಅಷ್ಟಿದ್ದರೆ ಬಿಂದಾಸ್ ಆಗಿ ಓಡಾಡಲಿ ನೋಡೋಣ. ಆಗಲ್ಲ ಅದು. ಬರಿ ಡೈಲಾಗ್ ಗಳು ಅಷ್ಟೆ.

ಇಷ್ಟು ಹೇಳಿದ ಮೇಲೆ ನಾನು ಮಹಿಳಾ ವಿರೋಧಿ ಎಂದು ನೀವು ಅಂದುಕೊಂಡರೆ ಅದು ತಪ್ಪು. ನಾನು ಏನೇ ಮಾಡಿದರೂ “ಅಗತ್ಯ” ಮತ್ತು ಈಗ ಇರುವುದನ್ನು ಕಳೆದುಕೊಳ್ಳುವುದರ ಬಗ್ಗೆ ಚಿಂತಿಸುತ್ತೇನೆ. ಯಾವಾಗ comfort ಇಲ್ಲ ಎನ್ನುವುದು ಗೊತ್ತಾಯಿತೊ? ಅವತ್ತಿನಿಂದ ಈ ಹುಡುಗಿಯರಿಗೆ ಬಟ್ಟೆ ಹಾಕಿಕೊಳ್ಳಲು ಸ್ವಂತ ಅಧಿಕಾರ ಇದೆ ಎಂದು ಪಕ್ಕದ ಮನೆಯವಳು ಏನು ಹಾಕಿಕೊಳ್ಳುತ್ತಾಳೊ ಅದನ್ನೆ ಅನುಸರಿಸುವ ಮತ್ತು ಅನುಕರಿಸುವ ಹುಚ್ಚು ಇವರಿಗೆ ಎನ್ನುವುದು ನನ್ನ ಭಾವನೆ. ಹಾಗೆ ಮಾಡಿ ತಮ್ಮ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಭಾವನೆ ಕೂಡಾ ಇವರಿಗೆ ಇರುವುದಿಲ್ಲ. “ನಾನು ಪಾಶ್ಚಾತ್ಯ ಬಟ್ಟೆಗಳನ್ನು ಕಾಪಿ ಮಾಡುತ್ತಿದ್ದೇನೆ” ಎಂದು ಹೇಳುವ ಬದಲು ನಮ್ಮ ಕಿವಿ ಖಾಲಿ ಇದೆ ಅಂತ ಇವರು ನಮಗೆ comfort ನ ಲಾಲ್ ಬಾಗ್ ತೋಟವನ್ನೆ ಮುಡಿಸಲು ಬರುತ್ತಾರೆ. ಹಾಗೆ ಬಂದಾಗ ನಾವು, ನನಗೆ ಇಷ್ಟು ವರ್ಷದಲ್ಲಿ pant, shirt ನಲ್ಲಿ ಸಿಕ್ಕದ comfort ನಿನಗೆಲ್ಲಿಂದ ಸಿಕ್ಕಿತು ಎನ್ನುವ ಪ್ರಶ್ನೆ ಕೇಳಬೇಕಾಗುತ್ತದೆ. ಮಾತ್ರವಲ್ಲ ಮಾನಸಿಕ ತಜ್ನರ ಬಳಿಗೂ ಕರೆದುಕೊಂಡು ಹೋಗಬೇಕಾಗುತ್ತದೆ.

Wednesday, July 11, 2007

ಬಾಳ ಪಯಣದ ಸಿಂಹಾವಲೋಕನ…

“Being unwanted, unloved, uncared for, forgotten by everybody, I think that is a much greater hunger, a much greater poverty than the person who has nothing to eat.” -- Mother Teresa.

ನಾನು ಏಕಾಂಗಿಯಾಗಿ ಬೆಂಗಳೂರಿಗೆ ಬಂದಿಳಿದಾಗ ನನ್ನ ಕೆಲವು ಬೆರಳೆಣಿಕೆಯ ಗೆಳೆಯರು ಬಿಟ್ಟರೆ ಬೇರೆ ಯಾರೂ ನನಗೆ ಗೊತ್ತಿರಲಿಲ್ಲ. ಯಾರ ಸಹಾಯವೂ ಇಲ್ಲದೆ ಬೆಂಗಳೂರಿಗೆ ಬಂದು ಒಂದು ರೂಮ್ ಮಾಡಿಕೊಂಡಿದ್ದೆ. ಗೆಳೆಯರೆಲ್ಲ ವೀಕೆಂಡ್ ನಲ್ಲಿ ೨ ಗಂಟೆ ಸಿಗುತ್ತಾರೆ, ಹೋಗುತ್ತಾರೆ. ಆದರೆ ಆಗ ನನಗೆ ಒಂಥರ ವಿಚಿತ್ರ ಯೋಚನೆಗಳು. ಒಂದು ರೀತಿ ನೋಡಿದರೆ ನನಗೆ ಎಲ್ಲರೂ ಇದ್ದಾರೆ; ಇನ್ನೊಂದಡೆ ನೋಡಿದರೆ ನನಗೆ ಬೇಕಾದವರು ಯಾರೂ ಇಲ್ಲ. ಹಾಸ್ಟೆಲಿನ ಗೆಳೆಯರ ಸಾಲನ್ನೆ ಮರೆತು, ಒಂದು ರೀತಿಯಲ್ಲಿ ಒಂಟಿ ಜೀವಿಯಾಗಿ ಬದುಕಬೇಕಾದ ಕಾಲ ಬಂದಿತ್ತು. ಆಗ ನನಗೆ ಹೊಳೆದಿದ್ದೆ ಹೊಸ ಹೊಸ ಯೋಚನೆಗಳು. ಈ ಹೊಸ ಯೋಚನೆಗಳು ನನ್ನ ಜೀವನದ ಸಂತೋಷಕ್ಕೆ ದಾರಿ ಆಗಬಹುದು ಎಂದು ನಾನು ಆರಂಭಿಸಿದ ಕ್ಷಣದಲ್ಲಿ ಯೋಚಿಸಿರಲಿಲ್ಲ. ನನಗೆ ಕೆಲವು ವಿಷಯಗಳನ್ನು ನಿಮ್ಮಲ್ಲೂ ಹಂಚಿಕೊಳ್ಳೋಣ ಅನಿಸಿತು. ಕೆಲವು ತುಣುಕುಗಳು ಇಲ್ಲಿವೆ.

ನಾನು ಮಲ್ಲೇಶ್ವರದ ಒಂದು ಹಣ್ಣಿನ ವ್ಯಾಪಾರ ಮಾಡುವ ಹೆಣ್ಣಿಗೆ ಹಣ್ಣು ಖರೀದಿಸುವ ಖಾಯಂ ಗಿರಾಕಿ. ಮೊದ ಮೊದಲು ನಾನು ಹಣ್ಣು ನೋಡಿ “ಬೆಲೆ ಎಷ್ಟು?” ಎಂದು ಕೇಳುತ್ತಿದ್ದೆ. ಅವಳು “೩೦ ರುಪಾಯಿ ಸರ್” ಎಂದು ಹೇಳುತ್ತಿದ್ದಳು. ಒಂದು ದಿನ ನನ್ನ ಪಕ್ಕ ಬಂದವನು “ಅಕ್ಕ ಎಷ್ಟು ಇದಕ್ಕೆ?” ಎಂದ. ಆಗ ನನಗೆ ಅನಿಸಿತು, ನಾವು ಯಾಕೆ ಬರೀ ನಮ್ಮ ಸಂಬಂಧಿಕರಿಗೆ ಮಾತ್ರ ಅಕ್ಕ, ಅಣ್ಣ ಎಂದು ಕರೆಯುತ್ತೇವೆ? ಬೇರೆಯವರಿಗೆ ಯಾಕೆ ಕರೆಯುವುದಿಲ್ಲ? ಎಂದು. ನಾನು ದಕ್ಷಿಣ ಕನ್ನಡದವನಾದ್ದರಿಂದ ಇಂಥ ಪದಗಳ ಬಳಕೆ ತುಂಬಾ ಕಡಿಮೆ. ಆ ದಿನ ಪ್ರಥಮ ಬಾರಿಗೆ ನಾನು ನನ್ನ ಜಾತಿ ಬಿಟ್ಟು ಯೋಚನೆ ಮಾಡಿದ್ದೆ. ಆವತ್ತು ನನಗೆ ಬೆಳೆಯಬೇಕೆಂದರೆ ಜಾತಿ ಮತ್ತು ಭಾಷೆ ಮೀರಿ ಬೆಳೆಯಬೇಕು ಅನಿಸಿತ್ತು.

ಮತ್ತೊಮ್ಮೆ ಅಲ್ಲಿ ಹೋದಾಗ “ ಅಕ್ಕ ಇದರ ಬೆಲೆ ಎಷ್ಟು?” ಎಂದು ಕೇಳಲು ಹೊರಟೆ. ಆದರೆ ಅವತ್ತು ಬಾಯಿಯಿಂದ “ಅಕ್ಕ” ಎನ್ನುವ ಪದ ಹೊರಗೆ ಬರಲೇ ಇಲ್ಲ. ಮೊದಲನೆ ಸಲ ನನಗೆ ಸಂಬಂಧಿಕರಲ್ಲದವರನ್ನು ನಮ್ಮವರ ಥರ ನೋಡುವುದು ಎಷ್ಟು ಕಷ್ಟ ಎನ್ನುವುದು ಅರಿವಾಗಿತ್ತು. ಕೆಲವು ದಿನಗಳ ನಂತರ ನನಗೆ ಕರೆಯುವುದು ರೂಢಿಯಾಯಿತು. ಈಗ ನಾನು ತುಂಬಾ ವ್ಯತ್ಯಾಸವನ್ನು ಕಂಡು ಹಿಡಿದಿದ್ದೇನೆ. ಸರ್ ಅಂತ ಕರೆಯುತ್ತಿದ್ದವಳು ಈಗ ಅಣ್ಣ ಎನ್ನುತ್ತಾಳೆ. ೩೦ ರುಪಾಯಿ ಅಂತ ಹೇಳಿ ನಿಮಗೆ ೨೫ ಎನ್ನುತ್ತಾಳೆ. ನನಗೆ ಇನ್ನೊಂದು ತುಂಬಾ ಇಷ್ಟವಾದ ವಿಷಯ ಎಂದರೆ ಕೆಲವು ಸಲ “ನೀವು ಚೆನ್ನಾಗಿರ್ಬೇಕಣ್ಣ” ಎನ್ನುತ್ತಾಳೆ.

ಕೆಲವು ದಿನಗಳ ಹಿಂದೆ ಮಲ್ಲೇಶ್ವರ ಮೈದಾನದ ಮೂಲೆಯೊಂದರಲ್ಲಿ ಕುಳಿತಿದ್ದಾಗ ಒಬ್ಬ ಮಹಿಳೆ ಬಂದು, “ಮಗಾ, ನಿನಗೆ ಒಳ್ಳೆಯದಾಗತ್ತೆ, ಒಂದು ರುಪಾಯಿ ಕೊಡು ಮಗಾ” ಎಂದಳು. ನಾನು ಹೆಚ್ಚಾಗಿ ಯಾರಿಗೂ ಭಿಕ್ಷೆ ನೀಡುವುದಿಲ್ಲ. ನನಗೆ ಬೇಡುವವರ ಅಸಹಾಯಕತೆ ಇಷ್ಟವಾಗುವುದಿಲ್ಲ. ಆದರೆ ನಾನು ಇವಳಿಗೆ ಯೋಚಿಸಿ ಒಂದು ರೂಪಾಯಿಯನ್ನು ನೀಡಿದ್ದೆ. ನಾನು ಯಾಕೆ ಕೊಟ್ಟೆ? ಅಂತ ನಿಮಗೆ ಅನಿಸಬಹುದು. ನನಗೆ ಅವಳ ಮಾತು ಇಷ್ಟವಾಗಿತ್ತು. ನೀವು ಗುರುತಿಸಿದ್ದೀರಾ ಎನ್ನುವುದು ನನಗೆ ಗೊತ್ತಿಲ್ಲ. ಆದರೆ “ನಿನಗೆ ಒಳ್ಳೆಯದಾಗಲಿ”, “ನೀನು ಚೆನ್ನಾಗಿರಬೇಕು” ಎಂದು ನನಗೆ ಹೇಳಿದವರನ್ನು ನಾನು ಲೆಕ್ಕ ಹಾಕಬಲ್ಲೆ. ಈ ಜಗತ್ತಿನಲ್ಲಿ ಹೆಚ್ಚಿನವರಿಗೆ ಕಾಲು ಎಳೆಯುವುದರ ಬಗ್ಗೆ ಮಾತ್ರ ಚಿಂತೆ, ಒಳ್ಳೆ ಮಾತುಗಳನ್ನು ಆಡಲು ಸಹ ಸಮಯವಿರುವುದಿಲ್ಲ. ಅಂಥವರ ಮಧ್ಯೆ ಇರುವ ನನ್ನಂಥವರಿಗೆ ಒಂದು ಒಳ್ಳೆಯ ಮಾತು ಕೇಳಿದಾಗ ಮನಸ್ಸಿನ ಮೂಲೆಯಲ್ಲೊಂದು ಸಂತೋಷ.

ನಾನು ಒಂದು ಇಂಗ್ಲಿಷ್ ಲೆಕ್ಚರ್ ನ pdf document ಓದಿದ್ದೆ. ಅದರಲ್ಲಿ ಯಾವತ್ತೂ ನಾವು ನಮ್ಮ ಸುತ್ತ ಮುತ್ತ ಇರುವವರನ್ನು ನಮ್ಮ ಸಂಬಂಧಿಕರ ಥರ ನೋಡಿಕೊಂಡರೆ, ಅವರಿಂದ ನಮ್ಮ ಕಡೆ ಒಂದು ಗೌರವ ಇರುತ್ತದೆ ಎಂದು ಬರೆದಿತ್ತು. ನನಗೆ ಒಂದು experiment ಮಾಡಿಯೆ ಬಿಡೋಣ ಅನಿಸಿತು. ಅವತ್ತಿನಿಂದ ನಮ್ಮ ವಾಹನ ಚಾಲಕನ ಹೆಸರು ಕರೆಯುವುದನ್ನು ಬಿಟ್ಟು “ಅಣ್ಣ” ಎಂದು ಕರೆಯಲು ಪ್ರಾರಂಭಿಸಿದೆ. ಇವತ್ತು ನಾನು ನನ್ನ ಕಂಪೆನಿಯ ವಾಹನ ಚಾಲಕನಲ್ಲಿ ಒಂದು ವ್ಯತ್ಯಾಸವನ್ನು ಗಮನಿಸಿದ್ದೇನೆ. ಹಾಗೆ ನನಗೆ ಒಂದು ಅಭ್ಯಾಸವಿದೆ. ನನ್ನ ಗೆಳೆಯರ ಅಮ್ಮಂದಿರನ್ನು “ಆಂಟಿ” ಎಂದು ಕರೆಯುವ ಬದಲು “ಅಮ್ಮ” ಎಂದೆ ಕರೆಯುತ್ತೇನೆ. ನಾನು ಹಾಗೆ ಕರೆದ ಮೇಲೆ ಆ ಅಮ್ಮಂದಿರು ನನ್ನನ್ನು ನೆನಪು ಇಟ್ಟುಕೊಂಡಿರುವುದನ್ನು ಗಮನಿಸಿದ್ದೇನೆ.

ಒಂದು ಕಾಲದಲ್ಲಿ ನಾನು ಶಂಕರ್ ನಾಗ್ ನ “ ಅನಾಥ ಮಗುವಾದೆ ..ನಾನು” ಎನ್ನುವ ಹಾಡನ್ನು ಗುನುಗುತ್ತಾ ಕೂತಿದ್ದೆ. ಆದರೆ ನನಗೆ ಅನಿಸಿದ್ದು, ನಿಜವಾಗಿ ಇಲ್ಲಿ ಹೆಚ್ಚಿನವರು ಅನಾಥರಲ್ಲ. ಅನಾಥರನ್ನಾಗಿ ಮಾಡುವುದು ನಮ್ಮ ಆಲೋಚನೆ ಎನ್ನುವುದನ್ನು ಮನಗಂಡಿದ್ದೇನೆ. ಎಷ್ಟೋ ಮಂದಿ ಜೀವನ ಬೋರು ಕಣೊ! ಎಂದು ಹೇಳಿಕೊಂಡು ಕುಡಿತ, ಸಿಗರೇಟು ಸೇದುವುದನ್ನು ನೋಡಿದ್ದೇನೆ. ಅವರಿಗೆ ಬದುಕಿನ ಸಣ್ಣ ಪುಟ್ಟ ಸಂತೋಷಗಳ ಅರಿವಿರುವುದಿಲ್ಲ. ತಮ್ಮ ನಾಳೆಯ ಬದುಕೆಂಬ ಮಹಲನ್ನು ಕಟ್ಟಬೇಕೆಂಬ ಆಸೆಯಿರುವುದಿಲ್ಲ. ನನಗೆ ಇವತ್ತು ತುಂಬ ಜನ ಕಷ್ಟ ಸುಖ ಕೇಳುವವರಿದ್ದಾರೆ; ಹೇಳುವವರಿದ್ದಾರೆ. ನಮ್ಮ ಜೀವನ ಇರುವುದು ಇಂತಹ ಸುಂದರವಾದ ಸಂಬಂಧಗಳಲ್ಲೆ ಅಲ್ಲವೆ? ನಿಮಗೇನನಿಸುತ್ತದೆ? “ನಿಮಗೆ ಒಳ್ಳೆಯದಾಗಲಿ”.

ಮಜಾ ಮಾಡಿ .!

Friday, June 22, 2007

ಇತಿ ಪಂಚ್ !!!

ಹುಡುಗಿಯನ್ನು ಕಂಡ ಹುಡುಗ ತನ್ನ ಮಾವನಿಗೆ ಹೇಳಿದ
ಚಿನ್ನದಂಥ ಮಗಳಿರಲು ಬಂಗಾರವೇಕೆ?
ಆಗ ಬಂತು ಮಾವನ ಮಾತು,
ವರ್ಷ ಕಳೆದಾಗ ಕಾಗೆ ಬಂಗಾರವಾದೀತು ಜೋಕೆ !

Tuesday, May 15, 2007

ಪೆದ್ದು ಪ್ರಸಂಗ .. !!

ನನ್ನ ರೂಮ್ ನ ಪಕ್ಕ ಒಬ್ಬ ಹೋಟೆಲ್ ನವನು ಇದ್ದಾನೆ. ಆ ಹೋಟೆಲ್ ಗೆ “ತಾಜ್” ಎಂದು ನಾಮಕರಣ ಮಾಡಿದ್ದೇನೆ. ಏನೇ ತಿಂಡಿ ಮಾಡಲಿ ಆ ತಿಂಡಿ ರುಚಿಸದ ಹಾಗೆ ಹೇಗೆ ಮಾಡುವುದು ಎನ್ನ್ನುವ ವಿಷಯದಲ್ಲಿ ಅವನು ಪಿ ಹೆಚ್ ಡಿ ಮಾಡಿದ್ದಾನೆ. ಕಳೆದ ಮೂರು ವರ್ಷಗಳಿಂದ ನಾನು ಇದರ ಪ್ರತಿ ದಿನದ ಗಿರಾಕಿ. ಆದ್ದರಿಂದ ನಾನು ಅಲ್ಲಿಗೆ ಹೋದಾಗ ಸ್ವಲ್ಪ ಮಾತು ಉಚಿತ J. ನಾನು ತಿಂಡಿ, ಊಟ ಮಾಡುತ್ತಿರುವಾಗ ತಲೆ ತಿನ್ನುತ್ತಿರುತ್ತಾನೆ. ಅವನಿಗೆ ಇಬ್ಬರು ಮಕ್ಕಳು. ಮಗ ಒಂದು 4 ಅಡಿ ಉದ್ದವಾದರೆ ಮಗಳು ಒಂದು 3 ಅಡಿ ಉದ್ದ ಇದ್ದಾಳೆ.

ನಿನ್ನೆ ನಾನು ಅವನಲ್ಲಿಗೆ ಹೋದಾಗ ಏನೋ ತಮಿಳಿನಲ್ಲಿ ಒಬ್ಬ ಗಿರಾಕಿ ಜೊತೆ ಎಂ. ಇ. ಎಸ್. ಕಾಲೇಜಿನ ಬಗ್ಗೆ ಮಾತಾಡುತ್ತಿದ್ದ. ನಾನು ಅವನ ಮುಖ ನೋಡಿದ್ದನ್ನು ನೋಡಿ ನನ್ನಲ್ಲಿ ಮಾತಿಗೆ ಶುರು. “ಆ ಕಾಲೇಜ್ ಇದೆಯಲ್ಲ ಸಾರ್ ಬೆಂಗಳೂರಿಗೆ ನಂಬರ್ ವನ್. 95% ಮಿನಿಮಮ್ ಸರ್. ಯಾವ influence ಕೂಡ ಇಲ್ಲ. ಚೆನ್ನಾಗಿ ಓದಿದ್ದೀಯಾ? ಬಾ , ಇಲ್ಲ ಅಂದರೆ ಹೋಯ್ತಾ ಇರು ಇಷ್ಟೆ ಸರ್ ಅಲ್ಲಿ. ಅಂಗವಿಕಲರಿಗೆ ಇಡೀ ಕಾಲೇಜಿಗೆ ಬರೀ 4 ಸೀಟು ಸರ್. ಅಂಗವಿಕಲ ಆಗಿರುವುದರಿಂದ ಸೀಟು ಸಿಕ್ಕಿದೆ. ಬಹಳ ದೊಡ್ಡ ಕಾಲೇಜ್ ಸರ್ ಅದು” ಅಂದ. ನಾನು ಯಾರೋ ಸಂಬಂಧಿಕರಿಗೆ ಸೀಟು ಸಿಕ್ಕಿದೆ ಅಂತ ಸರಿ ಸರಿ ಅಂದೆ. ಹಾಗೆ ಮಾತಾಡುತ್ತ fee ಕಟ್ಟಿರುವುದನ್ನು ತಂದು ತೋರಿಸಿದ. ಅದರಲ್ಲಿ ಅವನ ಮಗಳ ಹೆಸರು ಇತ್ತು. ಅದನ್ನು ನೋಡಿ ಕೇಳಿಯೇ ಬಿಟ್ಟೆ. ಇದ್ಯಾರಿಗೆ ಸೀಟು ನಿಮ್ಮ ಸಂಬಂಧಿಕರಿಗಾ? ಅಂತ. ಅದಕ್ಕೆ ಅವನು “ಇಲ್ಲ ಸರ್ ನನ್ನ ಮಗಳಿಗೆ; ಇಲ್ಲಾಂದರೆ ನಾನು ಯಾಕೆ fee ಕಟ್ಟಲಿ” ಅಂದ. ಅದನ್ನು ಕೇಳಿದ ನಾನು ಗಾಬರಿ ಬಿದ್ದೆ. ಇಷ್ಟು ಸಣ್ಣಗೆ ಕಾಣಿಸುವ 3 ಅಡಿ ಉದ್ದದ ಹುಡುಗಿ ಪಿ. ಯು. ಸಿ. ಎಂದು ನಂಬಲಿಕ್ಕಾಗಲಿಲ್ಲ. ನನ್ನ ಮಾನ ಹರಾಜು ಬಿದ್ದ ಹಾಗಾಗಿತ್ತು. “ಬೇರೆ ಕಾಲೇಜು ಇತ್ತು ಸರ್ ಆದರೆ ಇದು ಚೆನ್ನಾಗಿದೆ ಅಂತ ಇಲ್ಲಿ ಸೇರಿಸಿದೆ” ಅಂದ. ಬಿಲ್ ಒಂದು ರೂಪಾಯಿ ಕಡಿಮೆ ತೆಗೆದುಕೊಂಡ. ನನ್ನ ಮಾನ ಒಂದು ರೂಪಾಯಿಗೆ ಹರಾಜು ಹಾಕಿದ ಹಣವನ್ನು ಹಿಂದೆ ಕೊಟ್ಟನೆ? ಗೊತ್ತಿಲ್ಲ. J

ನಾನು ಪೆದ್ದ ಆಗಿದ್ದು ಆಯಿತು. ಇನ್ನೊಬ್ಬನನ್ನು ಯಾರನ್ನಾದರು ಪೆದ್ದನನ್ನಾಗಿ ಮಾಡೋಣ ಎಂದುಕೊಂಡು ನನ್ನ ರೂಮಿನ ಪಕ್ಕ ಬಂದೆ. ಅಲ್ಲೊಬ್ಬ ಮಂಗಳೂರಿನ ಗೆಳೆಯನಿದ್ದಾನೆ. ಇವನಲ್ಲೆ ನನ್ನ ಜಾಣತನ ತೋರಿಸೋಣ ಅನ್ನಿಸಿತು. ಹೋಗಿ ಕೇಳಿದೆ “ ತಾಜ್ ಹೋಟೆಲ್ ನವನ ಮಗಳು ಯಾವ ಕ್ಲಾಸ್ ಹೇಳು” ಅಂತ. ಕೂಡಲೆ ಅವನು PUC ಅಂದ. ನನಗೆ ಇನ್ನೊಂದು ಅದ್ದೂರಿ ಶಾಕ್. ನನ್ನ ಕಣ್ಣೇ ನನಗೆ ಸುಳ್ಳು ಹೇಳುವಂತಾಯಿತೆ ? ಅಂದುಕೊಂಡು ಚಿಂತಿಸಿದೆ. ಕೊನೆಗೆ ಅವನಲ್ಲಿ ಹೇಳಿದೆ “ ನಾನು ಅವಳು 5 ನೇ ಕ್ಲಾಸ್ ಅಂದುಕೊಂಡೆ” ಅಂತ. ಅದಕ್ಕೆ ಅವನು “ನೋಡೋದಕ್ಕೆ 3 ನೆ ಕ್ಲಾಸ್ ನವಳ ಥರ ಕಾಣಿಸುತ್ತಾಳೆ. ನನಗೆ ಅವಳ ಕ್ಲಾಸ್ ಹೇಗೆ ಗೊತ್ತಾಯಿತು ಎಂದರೆ” ಅಂತ ಇನ್ನೊಂದು ಕಥೆ ಪ್ರಾರಂಭ ಮಾಡಿದ.

ಒಂದು ವರ್ಷ ಹಿಂದೆ ಇವನು ಮತ್ತು ಇವನ ಗೆಳೆಯ ಇದೆ ತಾಜ್ ಗೆ ಹೋಗಿದ್ದಾಗ ಆ ಹುಡುಗಿ ಹೋಟೆಲ್ ನಲ್ಲಿ ಇದ್ದಳಂತೆ. ಆಗ ಇವನ ಗೆಳೆಯ ಇದ್ದವನು ಆ ಹುಡುಗಿಯ ಮುಖ ಹಿಡಿದುಕೊಂಡು “ ನೀನು ಯಾವ ಕ್ಲಾಸು?” ಎಂದನಂತೆ. ಅದಕ್ಕೆ ಅವಳು “ಒಂಬತ್ತನೆ ಕ್ಲಾಸು” ಅಂದಳಂತೆ. ನನಗೆ ಅವನು ಹೇಳಿದ್ದನ್ನು ಕೇಳಿ ನಗು ತಡೆಯಲಿಕ್ಕಾಗಲಿಲ್ಲ. ನಾನೆ ಸರಿ, ಸಂಬಂಧಿಕರಾ ಅಂದೆ. ಪಾಪ ಆ ಹುಡುಗನ ಗತಿ ಏನಾಗಿರಬೇಡ? ಅದಕ್ಕೆ ನಾನು ಹೆಚ್ಚೆಂದರೆ ಹುಡುಗಿಯರ ತಲೆ ಮೇಲೆ ಕೈ ಇಡುತ್ತೇನೆ. ಇಂಥ ವಿಪರೀತಕ್ಕೆ ಹೋಗುವುದಿಲ್ಲ ಅಂದುಕೊಂಡೆ. ಇನ್ನೊಂದು ಕಡೆಯಿಂದ “ ಅಬ್ಬ! ಇಂಥ ಕೆಲಸ ಆಗಲಿಲ್ಲ. ಬಚಾವ್ ! “ ಅಂತ ಯೋಚನೆ ಬೇರೆ. ಆದರೂ ನನ್ನ ಈ ಚಿಂತನೆಯನ್ನು ನೋಡಿಯೆ ಇರಬೇಕು ಹಿಂದಿನವರು ಹೇಳಿದ್ದು. “ ಬಿದ್ದರೂ ಮೀಸೆ ಮಣ್ಣಾಗಲಿಲ್ಲ” ಅಂದನಂತೆ ಅಂತ .!! J.

Monday, May 14, 2007

ಯಾರಿಗೆ ಬೇಕು ಈ ಲೋಕ? ಪ್ರೀತಿಯೆ ಹೋದರೂ ಇರಬೇಕಾ?

ಇವತ್ತು ಬೆಳಗ್ಗೆ ಎಂದಿನಂತೆ ನನ್ನ ಹಾಸ್ಟೆಲಿನ ಸ್ನಾನದ ಕೋಣೆಗೆ ಹೋಗುತ್ತಿದ್ದಾಗ, ಒಂದು ಕಾಗದ ಸುಟ್ಟು ಬೂದಿಯಾಗಿರುವುದನ್ನು ನೋಡಿದೆ. ಕೂಡಲೆ ನನ್ನ ಡಿಟೆಕ್ಟಿವ್ ಮನಸ್ಸು ಯೋಚನೆಗೆ ಶುರುವಿಟ್ಟುಕೊಂಡಿತು. ಈ ಕೆಲಸ ಯಾರು ಮಾಡಿರಬಹುದು? ಸುಟ್ಟು ಹಾಕಿರಬೇಕಾದರೆ ಏನಾದರೂ ತುಂಬಾ ಅಮೂಲ್ಯವಾದ ಕಾಗದ ಪತ್ರವೇ ಇರಬೇಕು. ಮಾರ್ಕ್ಸ್ ಕಾರ್ಡ್ ಗೆ ಏನಾದರೂ ಈ ಗತಿ ಬಂತೆ ಎಂದು ಬಗ್ಗಿ ನೋಡಿದೆ. ಹಾಗೆ ನೋಡಿದಾಗ ಸುಟ್ಟು ಹೋಗಿದ್ದ ಬೂದಿಯ ಮೇಲೆ ಏನೋ ಒಂದು ಅಂದವಾದ ಡಿಸೈನ್ ಕಾಣಿಸಿತು. ಅದನ್ನು ನೋಡಿ ಮನಸ್ಸಿಗೆ ಸಮಾಧಾನ. ಅಬ್ಬ ! ಮಾರ್ಕ್ಸ್ ಕಾರ್ಡ್ ಅಲ್ಲ ಅಂತ. ಹಾಗೆ ಸ್ವಲ್ಪ ಕಾಗದದ ಚೂರು ಇರಬೇಕಲ್ಲ ಎಂದು ಸರಿಯಾಗಿ ನೋಡಿದೆ. ಒಂದು ಸಣ್ಣ ಚೀಟಿ ಸಿಕ್ಕಿತಲ್ಲ. ಏನೆಂದು ನೋಡಿದರೆ ಅದು ಮದುವೆ ಕಾಗದ.

ಪಾಪ !! ಯಾವುದೊ ಹುಡುಗನಿಗೆ ಅವನ ಹುಡುಗಿ ಕೈ ಕೊಟ್ಟಿರಬೇಕು ಅಥವಾ ಈತನೇ ಹೃದಯದಲ್ಲಿ ಇಟ್ಟುಕೊಂಡಿದ್ದನಾ? ಯಾರಿಗೆ ಗೊತ್ತು? ಅಂತೂ ಹುಡುಗನಿಗೆ ಲವ್ ಪ್ರಾಬ್ಲಮ್. ಒಂದು ಥರಾ “ಮುಂಗಾರು ಮಳೆ” ಕೇಸು. “ಹುಚ್ಚು ಪ್ರೀತಿಯನ್ನು ಮೆಚ್ಚಿಕೊಂಡನಲ್ಲ; ಕೈ ಕೊಟ್ಟ ಮೇಲೆ ಗೊತ್ತಾಯಿತಲ್ಲ J” ಅಂತ. ಏನೇ ಇರಲಿ, ನನಗೆ ಅವನ ಪೆದ್ದುತನಕ್ಕೆ ಒಂದು ಸಲ ಝಾಡಿಸಿ ಒದ್ದು ಬಿಡೋಣ ಅನ್ನಿಸಿತು. ಯಾಕೆಂದರೆ, ಕಾಗದವನ್ನು ಸುಟ್ಟು ಹಾಕಿದ ತಕ್ಷಣ ಅವನ ನೆನಪುಗಳು ಸುಟ್ಟು ಹೋಗಲು ಸಾಧ್ಯವೇ? ಹುಡುಗಿಯನ್ನು ಆ ಕ್ಷಣದಿಂದ ನೆನೆಯದಿರಲು ಸಾಧ್ಯವೇ? ಸಾಧ್ಯವಿದ್ದರೆ ಅದನ್ನು ಮಾಡಲಿ. ಅದು ಬಿಟ್ಟು ಯಾವುದೋ ಅವಳ ಮದುವೆ ಕಾಗದವನ್ನು ಸುಡುವುದು ಅಕ್ಷಮ್ಯ ಅಪರಾಧ. ಅದು ಕೂಡ ನನಗೆ ಅರ್ಧ ಹೆಸರು ಕಾಣಿಸುವ ಹಾಗೆ ಸುಟ್ಟಿದ್ದಾನೆ !. ಬಿಡಬೇಕೆ ಅವನನ್ನು? ಅದಲ್ಲದೆ ಅವನಿಗಿರುವ ಕೋಣೆಯಲ್ಲಿ ಸುಡುವುದನ್ನು ಬಿಟ್ಟು ಸ್ನಾನದ ಕೋಣೆಯ ಪಕ್ಕ ಸುಡುವುದರ ಮರ್ಮ ನನಗೆ ತಿಳಿಯದು. ಬಹುಶಃ ಅವನು ಸ್ನಾನ ಮಾಡುತ್ತಿರಬೇಕಾದರೆ ಆ ಹುಡುಗಿಯ ಮೊದಲ ಫೋನ್ ಕಾಲ್ ಬಂದಿತ್ತೇನೋ? J

ಈಗ ನಾನು ಈ ಹೃದಯವಂಚಿತ ಯಾರಿರಬಹುದು ಎಂಬ ಅರ್ಥವಿಲ್ಲದ ಯೋಚನೆಯಲ್ಲಿ ತೊಡಗಿದ್ದೇನೆ J. ಯಾಕೆಂದರೆ ನಾವಿರೋದೆ ಹಾಗೆ !!

Thursday, April 26, 2007

ಮಲ್ಲೇಶ್ವರದ ಮೈದಾನದ ಮೆಟ್ಟಿಲಲ್ಲಿ ಕುಳಿತು …

ನನ್ನ ಪಾಲಿಗೆ ಮಲ್ಲೇಶ್ವರದ ಮೈದಾನ ಒಂದು ರೀತಿಯಲ್ಲಿ ಸಮಯವನ್ನು ಕೊಲ್ಲುವ ಸ್ಥಳ. ಮೈದಾನದಲ್ಲಿ ಕ್ರಿಕೆಟ್, ಬಾಸ್ಕೆಟ್ ಬಾಲ್ ಆಡುವವರನ್ನು ನೋಡಿಕೊಂಡು ನನ್ನದೇ ಚಿಂತನೆಯಲ್ಲಿ ಮುಳುಗಿರುತ್ತೇನೆ. ಅದಲ್ಲದೆ ನಾನು ನನ್ನ ಗೆಳೆಯರನ್ನು ಭೇಟಿಯಾಗುವ ಸ್ಥಳ ಕೂಡ ಮಲ್ಲೇಶ್ವರಂ ಮೈದಾನ. ಮೈದಾನದ ಅಕ್ಕಪಕ್ಕ ಕಲ್ಲಂಗಡಿ ಹಣ್ಣಿನ ಅಂಗಡಿ, ಪಾನಿ ಪುರಿ ಇವೆ. ಇತ್ತೀಚೆಗೆ ಮೈದಾನದಲ್ಲಿ ದೊಡ್ಡ ದೊಡ್ಡ ವಿದ್ಯುದ್ದೀಪಗಳನ್ನು ಅಳವಡಿಸಿರುವುದರಿಂದ ರಾತ್ರಿ 8 ಗಂಟೆಯವರೆಗೂ ಜನ ಇರುತ್ತಾರೆ. ಹಲವಾರು ಪ್ರಮುಖ ಕಾರ್ಯಕ್ರಮಗಳು ಸಹ ಈ ಮೈದಾನದಲ್ಲಿ ಜರುಗುತ್ತವೆ.

ಒಂದು ದಿನ ನಾನು ನನ್ನ ಗೆಳೆಯರ ಜೊತೆ ಇದೇ ಮೈದಾನದ ಮೆಟ್ಟಿಲಿನಲ್ಲಿ ಕುಳಿತು ಹಾಳು ಹರಟೆಯಲ್ಲಿ ತೊಡಗಿದ್ದೆ. ಆಗ ಅಲ್ಲೊಂದು ನನ್ನ ಯೋಚನೆಗೆ ಮೀರಿದ ಘಟನೆಯೊಂದು ನಡೆಯಿತು. ಒಬ್ಬಳು ಹುಡುಗಿ ವಯಸ್ಸು 25 ರ ಆಸು- ಪಾಸು ಇರಬಹುದು, ತಕ್ಷಣ ನನ್ನ ಪಕ್ಕ ಬಂದು ಕೈ ಕೊಡಿ ಅಂದಳು. ಅವಳು ಕೇಳುವ ತನಕ ನಾನು ಆ ಹುಡುಗಿಯ ಕಡೆ ಗಮನವನ್ನೇ ಹರಿಸಿರಲಿಲ್ಲ. ಅವಳ ಆ ಮಾತು ಕೇಳಿ ನನಗೆ ಆಶ್ಚರ್ಯ. ಇವಳಿಗೇನಾಗಿದೆ? ನನ್ನ ಕೈ ಕೇಳುತ್ತಾ ಇದ್ದಾಳಲ್ಲ ಅಂತ ನಾನು ನಂಬದಿರುವಂತೆ ಮೆತ್ತಗೆ ನನ್ನ ಕೈಯನ್ನು ಅಗಲಿಸಿ ಅವಳತ್ತ ಚಾಚಬೇಕು ಎನ್ನುವಷ್ಟ್ರರಲ್ಲಿ ಅವಳೇ ಅವಳ ಕೈಯನ್ನು ನನ್ನ ಕೈಗೆ ತಾಗಿಸಿದಳು. ಅದನ್ನು ನೋಡಿದ ನಾನು ಸ್ಥಂಭೀಭೂತನಾಗಿ ಹೋದೆ.

ಆ ಹುಡುಗಿಗೆ ತನ್ನ ಕೈ ಬೆರಳುಗಳ ಮೇಲೆ ಕಂಟ್ರೋಲ್ ಅನ್ನೋದೆ ಇರಲಿಲ್ಲ. ನಡೆಯಲು ಸರಿಯಾಗಿ ಆಗುತ್ತಿರಲಿಲ್ಲ. ಅವಳಿಗೆ ಅಲ್ಲಿರುವ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು. ಅದಕ್ಕಾಗಿ ನನ್ನ ಸಹಾಯವನ್ನು ಕೇಳಿದ್ದಳು. ನಾನು ಕೂಡಲೆ ನನ್ನ ಯೋಚನಾ ಸರಣಿಯನ್ನು ಕೊನೆಗೊಳಿಸಿ ಎದ್ದು ನಿಂತು ಕೈ ಹಿಡಿದು ಒಂದೊಂದೆ ಮೆಟ್ಟಿಲು ಮೇಲೆ ದಾಟಿಸಿದೆ. ಕೊನೆಯ ಮೆಟ್ಟಿಲನ್ನು ಅವಳು ನನ್ನ ಸಹಾಯವಿಲ್ಲದೆಯೆ ಹತ್ತಿದಳು. ಆಗ ಅವಳ ಛಲ ನನಗೆ ಇಷ್ಟವಾಯಿತು. ಎಲ್ಲಾ ಮೆಟ್ಟಿಲು ದಾಟಿಸಿ ಅವಳು ಹೊರಟು ಹೋದ ತಕ್ಷಣ ಮನಸ್ಸಿನಲ್ಲಿ ಏನೋ ನೋವು. ಅವಳ ಸಂಕಟ ಏನಿರಬಹುದು? ಎಂದು ತಿಳಿದುಕೊಳ್ಳುವ ತುಡಿತ. ಅವಳ ಹೆಸರನ್ನಾದರೂ ಕೇಳಬೇಕಿತ್ತು ನಾನು ಎನ್ನುವ ಅವ್ಯಕ್ತ ಬೇಸರ. ಅವಳಿಗೆ ಬೇರೆ ಏನಾದರೂ ಸಹಾಯ ಮಾಡುವ ಅವಕಾಶ ಇದ್ದಿದ್ದರೆ? ಅನ್ನುವ ಆಸೆ. ಕೊನೆಗೆ ಮೆಟ್ಟಿಲಾದರೂ ಹತ್ತಿಸಿ ಅವಳಿಗೆ ಆಸರೆಯಾದೆನಲ್ಲಾ ಎನ್ನುವ ಸಮಾಧಾನ.

ಮೆಟ್ಟಿಲಿಳಿದು ಬಂದು ಗೆಳೆಯರಿರುವಲ್ಲಿ ಬಂದು ಕುಳಿತು ಕೇಳಿದೆ. “ಅವಳಿಗೇನಾಗಿರಬಹುದು?” ಅಂತ. ಒಬ್ಬ ಗೆಳೆಯನಿಂದ ಉತ್ತರ ಬಂತು. “ ಅವಳು ಹೋಗಿ ಆಯ್ತು. ಈಗ ಯಾಕೆ ಚಿಂತೆ ಮಾಡ್ತಾ ಇದ್ದೀಯಾ? “ ಅಂತ. ಅವಳು ಹೋಗಿರಬಹುದು ಆದರೆ ಅವಳು ಬಿಟ್ಟು ಹೋದ ಆ ಕ್ಷಣದ ನೆನಪು ನನ್ನನ್ನು ಇಂದಿಗೂ ಕಾಡುತ್ತಲೇ ಇದೆ. ಇನ್ನೊಮ್ಮೆ ಸಿಕ್ಕಿದರೆ ಕೇಳುತ್ತೇನೇನೊ?


ಮಜಾ ಮಾಡಿ.
- ರವಿಪ್ರಸಾದ್ ಶರ್ಮಾ ಕೆ.

Thursday, April 12, 2007

ತಂತ್ರಜ್ನ ನ ವಚನಗಳು.

ಕೆಲಸ ಮಾಡಿದಂತಿರಬೇಕು, ಕೆಲಸ ಮಾಡದಲೆ ಇರಬೇಕು
ಕೆಲಸ ಮಾಡಿದವ ಸತ್ತ ತಂತ್ರಜ್ನ

Tuesday, March 27, 2007

ಓ ಹೆಣ್ಣೆ! ಏನು ನಿನ್ನ ಜಡೆಯ ಮಾಯೆ?




ಈಗಿನ ಹೈಟೆಕ್ ಕಾಲದಲ್ಲಿ ಜಡೆಯ ಬಗ್ಗೆ ಬರೆದರೆ ತಪ್ಪಾದೀತು. ಆದರೂ ಕೂಡ ಜಡೆಯ ಮೇಲೆ ನನಗೆ ಸಣ್ಣವನಿದ್ದಾಗಿನಿಂದಲೂ ಒಂದು ವಿಶೇಷ ಅಕ್ಕರೆ. ಜಡೆ ಮೇಲೊಂದು ಹೂವು ಇದ್ದರೆ ಹೆಣ್ಣಿಗೊಂದು ಕಳೆ ಇದ್ದ ಹಾಗೆ. ಜಡೆಯಲ್ಲಿ ಕೂಡ ವಿವಿಧ ವಿಧಗಳಿವೆ. ಉದ್ದವಾಗೆ ಹೆಣೆದ ಜಡೆ, ಕುದುರೆ ಬಾಲ ( pony tail), ಬಾಬ್ ಕಟ್, ಭಟ್ಟರ ಜಡೆ ಇತ್ಯಾದಿ.

ನಾನು ಸಣ್ಣವನಿರುವಾಗ ನನಗೆ ನನ್ನ ಅಕ್ಕನ ಜಡೆ ಹಿಡಿಯುವ ಅಭ್ಯಾಸ ಇತ್ತು. ಒಂದು ವೇಳೆ ಅವಳು ತನ್ನ ಜಡೆ ಸ್ವಲ್ಪ ತುಂಡರಿಸಿದರೂ ನಾನು ಅವಳ ಜೊತೆ ಜಗಳಕ್ಕೆ ನಿಲ್ಲುತ್ತಿದ್ದೆ. ಏನು ನಿನಗೆ ಒಂದು ಚೂರು ಕೂಡ ಜಡೆಯ ಮೇಲೆ ಕನಿಕರವೇ ಇಲ್ಲ ಎಂದು ಬೈಯ್ಯುತ್ತಾ ಇದ್ದೆ. ಈಗ ಅವಳ ಮಗನಿಗೆ ಮಲಗಿ ನಿದ್ದೆ ಮಾಡಬೇಕಿದ್ದರೆ ಜಡೆ ಬೇಕೆ ಬೇಕು. ಅಂದರೆ ಜಡೆಗೆ ಮಲಗಿಸುವ ಗುಣ ಇದೆ ಎಂದಾಯಿತು.

ಈಗಲೂ ನನಗೆ ಹುಡುಗಿಯರ ಜಡೆ ನೋಡುವ ಒಂದು ಅಭ್ಯಾಸ. ಒಂದು ದಿನ ನನ್ನ ಗೆಳೆಯನ ಜೊತೆ ಹಾಳು ಹರಟೆಯಲ್ಲಿ ತೊಡಗಿದ್ದೆ. ಆಗ ಅವನು ನನಗೆ ಗೊತ್ತಿರುವ ಹುಡುಗಿ ಹೆಸರು ಹೇಳಿದ. ನನ್ನ ತಲೆಗೆ ಅದು ಹೊಳೆಯಲೇ ಇಲ್ಲ. ನನ್ನ ಪುಣ್ಯಕ್ಕೆ ಉದ್ದ ಜಡೆ ಅಂದ ನೋಡಿ! ಕೂಡಲೆ ನೆನಪಿಗೆ ಬಂತು ಹುಡುಗಿಯ ಮುಖ. ಅದರ ಅರ್ಥ ಏನಂದರೆ ಯಾರದಾದರೂ ಗುರುತು ಹಿಡಿಯಲು ಜಡೆ ತುಂಬಾನೆ ಸಹಕಾರಿ ಅಂತ.

ನೀವು ದಕ್ಷಿಣ ಕನ್ನಡದ ಮದುವೆಗಳನ್ನು ನೋಡಿದ್ದರೆ, ಆ ಮದುವೆಗಳಲ್ಲಿ ಹೆಣ್ಣಿನ ಜಡೆಯನ್ನು ಗುಲಾಬಿ, ಮಲ್ಲಿಗೆ, ದುಂಡು ಮಲ್ಲಿಗೆ, ಜಾಜಿ ಹೂವುಗಳಿಂದ ಅಲಂಕರಿಸಿರುತ್ತಾರೆ. ಆ ಜಡೆಯ ಅಂದವನ್ನೊಮ್ಮೆ ನೋಡಬೇಕು. ಫೋಟೊಗ್ರಾಫರ್ ನ ಕಾಟದಲ್ಲಿ ನೋಡುವುದು ಕೂಡ ಒಂದು ಸಾಹಸವೆ ಬಿಡಿ. ಈಗ ಜಡೆ ಪುರಾಣ ನೋಡಿ ಎಲ್ಲಾ ಥರದ ಜಡೆ ಹಿಡಿಯಲು ಓಡಿ ಬಿಡಬೇಡಿ. ಈಗಿನ ಕಾಲದಲ್ಲಿ ಹುಡುಗರು ಕೂಡ ಜಡೆ ಬಿಡುತ್ತಾರೆ ಸ್ವಾಮಿ! J.

ಈ ಜಡೆಗೆ ಮರುಳಾಗದಿರುವವರು ತುಂಬಾನೆ ಕಡಿಮೆ ಜನ ಬಿಡಿ. ನೀವು ಮೈ- ಆಟೊಗ್ರಾಫ್ ಚಿತ್ರ ನೋಡಿದ್ದರೆ ಅದರಲ್ಲಿ ಸುದೀಪ್ ಬಾಲಕನಾಗಿದ್ದಾಗ ಜಡೆ ಹಿಂದುಗಡೆ ಹೋಗುವ ಒಂದು ಕಥೆ ಇದೆ. ಕೊನೆಗೆ ಅ ಹುಡುಗಿಯನ್ನು ಬಿಡುವಾಗಲೂ ಜಡೆಯ ತುದಿಯನ್ನು ಕತ್ತರಿಸಿ ಇಟ್ಟುಕೊಳ್ಳುತ್ತಾನೆ. ಕೆಲವು ಹಿಂದಿ ಹಾಡುಗಳಲ್ಲಿಯೂ ಹುಡುಗಿಯರ ಜಡೆ ಹಿಡಿದು ಕುಣಿಯುವ ದ್ರಶ್ಯಗಳು ತುಂಬಾನೆ ಇವೆ. ಇನ್ನು ಹುಡುಗಿಯರ ಹಾಸ್ಟೆಲ್ ಗಳಲ್ಲಿ ಒಂದು ಥರ ಬ್ಲಾಕ್ ಮೇಲ್ ಮಾಡಲು ಕೂಡ ಜಡೆ ಉಪಯೋಗಿಸಲ್ಪಡುತ್ತದೆ.

ಹಿಂದಿನ ಕಾಲದ ಹುಡುಗಿಯರಿಗೆ ತುಂಬಾ ಉದ್ದವಾದ ಜಡೆ ಇರುತ್ತಿತ್ತಂತೆ. ನನಗೆ ಅನಿಸುತ್ತದೆ ಆಗ ಪೊರಕೆಯ ಅವಶ್ಯಕತೆಯೇ ಇರಲಿಲ್ಲವೇನೊ? ಅದಲ್ಲದೆ ಜಡೆಯ ಇನ್ನೊಂದು ಬಹು ಮುಖ್ಯ ಉಪಯೋಗ ಇದೆ. ನಿಮ್ಮ ಮನೆಯಲ್ಲಿ ಬೆಕ್ಕು ಮೂಡು ಕೆಟ್ಟು ಕೂತಿದೆ ಅಂತಿಟ್ಟುಕೊಳ್ಳಿ. ಅದರ ಎದುರು ಒಂದು ಸಲ ಜಡೆಯನ್ನು ಆಡಿಸಿ ನೋಡಿ. ಛಂಗನೆ ಹಾರಿ ತನ್ನ ಆಟ ಪ್ರಾರಂಭ ಮಾಡುತ್ತೆ. ಇಂಥ ಒಂದು ಉಪಯೋಗ ನಿಮಗೆ ಗೊತ್ತಿತ್ತೆ? J.

ಜಡೆಯ ಮೇಲೆ ಗಾದೆಗಳು ಕೂಡ ಇವೆ. ಕೆಲವು ಸ್ಯಾಂಪಲ್ ಗಳು ಇಲ್ಲಿವೆ :
. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು.
. ನೂರು ಜನಿವಾರ ಒಟ್ಟಿಗೆ ಇರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ.
ಹೀಗೊಂದು ವ್ಯಂಗ್ಯ:
ಹಿಂದೆ ಹೆಣ್ಣಿನ ಹಿಂದೆ ಉದ್ದವಾದ ಜಡೆ ಇರುತ್ತಿತ್ತು. ಈಗ ಹೆಣ್ಣಿನ ಮುಂದೆ ಕಂಪೆನಿಯ ಐಡಿ ಇರುತ್ತದೆ.

ಜಡೆಯ ಬಗ್ಗೆ ಕೆ. ಎಸ್. ನ. ಅವರ ಒಂದು ಕವನ :
ಅಡಿಯ ಮುಟ್ಟ ನೀಳ ಜಡೆ ಮುಡಿಯ ತುಂಬ ಹೂವ ಹೆಡೆ
ಇವಳು ಅಡಿಯನಿಟ್ಟ ಕಡೆ ಹೆಜ್ಜೆಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ
ಇವಳು ಯಾರು ಬಲ್ಲೆಯೇನು ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು ಇವಳು ಏತಕೋ ಬಂದು ನನ್ನ ಸೆಳೆದಳು

ಜಡೆ ಪುರಾಣದ ಕೊನೆಗೆ, ನಾನೇನಾದರೂ ನನ್ನ ಹುಡುಗಿಗೆ ಗುಲಾಬಿ ಹೂವು ಕೊಟ್ಟರೆ, ಅವಳಲ್ಲಿ ಜಡೆ ಹಾಕಲು ಹೇಳುವ ಪ್ಲಾನ್ ಇದೆ. ಯಾಕೆ ಅಂದರೆ, ನಾನು ಕೊಟ್ಟ ಹೂವು ಚೆಂದವೋ ಅದ ಮುಡಿದ ನನ್ನ ಮನ ಮೆಚ್ಚಿದ ಹುಡುಗಿ ಚೆಂದವೋ ನೋಡಬಹುದಲ್ವೆ?


-- Raviprasad Sharma K.

Monday, March 26, 2007

ಆ ಮಾತು

ನೆನಪಾಗುತ್ತಿವೆಯೆ ನನ್ನ ಅಂದಿನ ಆ ಮಾತುಗಳು
ಅವುಗಳನ್ನು ಮತ್ತೆ ಕೇಳಬೇಕೆಂಬ ಹಂಬಲವೆ ?
ಹೇಳು ಎಂದಾಗ ಮತ್ತೆ ತಿರುಗಿ ಹೇಗೆ ಹೇಳಲಿ ಹೇಳು
ನನ್ನ ಸ್ವಾಭಿಮಾನಿ ಮನಸ್ಸು ಅದಕ್ಕೆ ಒಪ್ಪಬೇಕಲ್ಲವೆ ?

Friday, March 23, 2007

ಮಗು uncle ಅಂದ ಕಥೆ...




ಸಣ್ಣ ಮಕ್ಕಳು ಅಂದಾಗ ಎಲ್ಲರಿಗು ಒಂದು ಥರಾ ಖುಷಿ. ಮಕ್ಕಳ ಆ ಮುದ್ದು ಮಾತು ಯಾವಾಗಲು ಕಿವಿಗೆ ಮತ್ತು ಮನಸ್ಸಿಗೆ ಒಂದು ಉತ್ಸಾಹವನ್ನು ಕೊಡುತ್ತದೆ. ಆದರೆ ಸಣ್ಣ ಮಕ್ಕಳ ಕೀಟಲೆ ಮಾತ್ರ ತಡೆಯೋದೆ ಕಷ್ಟ.




ಹೀಗೆ ಒಂದೆರಡು ದಿನ ಹಿಂದೆ ನಮ್ಮ ಕಂಪೆನಿಯ employee ಒಬ್ಬರು ಮಗುವಿನ ಜೊತೆ ಬಂದಿದ್ದರು. ಹಾಗೆ ಏನು ಹೆಸರು ಅಂತ ಮಾತಾಡುತ್ತಾ ಒಬ್ಬ ಹುಡುಗಿಯನ್ನು( ಮದುವೆ ಆಗಿಲ್ಲ) ಯಾರೋ ಒಬ್ಬರು ಆ ಮಗುವಿಗೆ ತೋರಿಸಿ ಕೇಳಿದರು. ಇವಳು ಅಕ್ಕನ ಥರ ಕಾಣಿಸುತ್ತಾಳಾ ಅಥವಾ aunty ಥರ ಕಾಣಿಸುತ್ತಾಳಾ ಅಂತ. ಆ ಮಗು ಸೀದಾ ಏನೂ ಯೋಚನೆ ಮಾಡದೆ aunty ಅಂತು. ಅದನ್ನು ಕೇಳಿ ನನಗೆ ನಗು ತಡೆಯೋದಕ್ಕಾಗಲಿಲ್ಲ. ಕಿಸಕ್ಕಂತ ನಕ್ಕು ಬಿಟ್ಟೆ. ನನ್ನ ನಗು ಕೇಳಿದ aunty ಗಳು ಇವನಿಗೆ ಮಾಡ್ತೇನೆ ಅಂತ ಮಗುವಿನಲ್ಲಿ ಕೇಳಿದ್ರು ಇವನು ಅಣ್ಣನ ಥರ ಕಾಣಿಸ್ತಾನ? ಅಥವ uncle ? ಅಂತ. ಮಗು uncle ಅಂದೇ ಬಿಟ್ಟಿತು. ನನ್ನ ನಗು ಕೂಡ ಅಲ್ಲಿಗೆ ನಿಂತಿತ್ತು.




ಇವತ್ತು ಮತ್ತೆ ನನ್ನ ಪಕ್ಕದ aunty ಮಗು ಜೊತೆ ಬಂದಿದ್ದಾರೆ. ಬರೋದಲ್ದೆ ಅಣ್ಣನ? uncle ಆ? ಕೇಳಲಾ ಅಂದ್ರು. ಅಯ್ಯೋ! ಒಂದು ಸರಿ ಕೇಳಿ ಅನ್ನಿಸಿಕೊಂಡಿದ್ದು ಆಯಿತು ಮತ್ತೆ ಪುನಹ ಬೇಡ ಮೇಡಮ್ ಅನ್ನೋ ಪರಿಸ್ಥಿತಿ ನ ತಂದು ಇಟ್ರು.

Superb Quote


Wednesday, March 14, 2007

Tuesday, March 13, 2007

ಇಂದಿನ ವಕ್ರ ತುಂಡು…

ನಾಗನ ಹೆಡೆಯನ್ನಾದರೂ ಹಿಡಿ ಆದರೆ
ನಾರಿಯ ಜಡೆಯನ್ನು ಹಿಡಿಯಬೇಡ !

Friday, March 9, 2007

ಮಂಗನ ಮನಕ್ಕೆ ಕನ್ನ ಹಾಕಿದಾಗ….

ನನಗೆ ಮತ್ತು ಮಂಗನಿಗೆ ಒಂದು ಥರ ಅವಿನಾಭಾವ ಸಂಬಂಧ. ನನ್ನದು ಮಂಗಳೂರಿನ ಪಕ್ಕದ ಹಳ್ಳಿಯಾಗಿರುವುದರಿಂದ ಮಂಗಗಳ ಜೊತೆಯಲ್ಲೆ ಬೆಳೆದವನು ಅನ್ನಬಹುದು. ಈ ಮಂಗನ ಮನಸ್ಸೇ ನನಗೆ ಒಂದು ಲೇಖನ ಬರೆಯುವ ಸ್ಪೂರ್ತಿಯನ್ನು ನೀಡಿದೆ.

ಮಂಗ ಅಂದ ಕೂಡಲೆ ನನಗೆ ನೆನಪು ಬರುವುದು ನಾವು ಸಣ್ಣ ಮಕ್ಕಳಿದ್ದಾಗ ಆಡುತ್ತಿದ್ದ ಮರ ಕೋತಿ ಆಟ. ಆ ಆಟದಲ್ಲಿ ಮರ ಏರಿ ಟೊಂಗೆ ಟೊಂಗೆ ಹಾರಿ ಕೈಗೆ ಸಿಗದ ಹಾಗೆ ಮರದ ತುದಿಯಲ್ಲಿ ಕುಳಿತುಕೊಳ್ಳುವಾಗ ಇದ್ದ ಉತ್ಸಾಹವೆ ಬೇರೆ ಬಿಡಿ. ಈಗ ಬೆಂಗಳೂರಿನಂಥ ಕಾಂಕ್ರೀಟ್ ಕಾಡಿನಲ್ಲಿ ಕೆಳಗೆ ನಿಂತು ನೋಡಲು ಕೂಡ ಮರಗಳೇ ಸಿಗುವುದಿಲ್ಲ. ಆದರೂ ಕೆಲವು ಮಂಗಗಳು ಈ ಕಾಂಕ್ರೀಟ್ ಕಾಡಿನಲ್ಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ನಮಗೆ ಅವು ಕಾಣ ಸಿಕ್ಕಾಗ ನಮಗೊಂದು ಗೆಸ್ಟ್ ವಿಸಿಟ್ ಅನ್ನಿ.

ಈ ಮಂಗಗಳು ಹೆಚ್ಚಾಗಿ ಕಾಣ ಸಿಗುವುದು ಬೆಟ್ಟ ಗುಡ್ಡಗಳಲ್ಲಿರುವ ದೇವಸ್ಥಾನಗಳಲ್ಲಿ. ನಮ್ಮ ಮನೆಯಿಂದ ಒಂದು ೫ ಕಿ.ಮಿ. ಅಂತರದಲ್ಲಿ ಒಂದು ಶಿವ ದೇವಸ್ಥಾನವಿದೆ. ತುಂಬಾ ಎತ್ತರದ ಕಲ್ಲಿನ ಮೇಲೆ ಈ ದೇವಸ್ಥಾನವನ್ನು ಕಟ್ಟಿದ್ದಾರೆ. ಅಲ್ಲಿ ಈ ಮಂಗಗಳಿಗೆ ಪ್ರತಿ ಮಧ್ಯಾಹ್ನ ಸರಿಯಾಗಿ ೧೨ಕ್ಕೆ ಊಟ ಹಾಕುತ್ತಾರೆ. ಈ ಮಂಗಗಳದು ಏನು ಸಮಯ ಪಾಲನೆ ಅಂತೀರಾ? ಸರಿಯಾಗಿ ಒಂದು ಐದು ನಿಮಿಷ ಇರಬೇಕಾದ್ರೆ ಹಾಜರ್!. ಈ ದೇವಸ್ಥಾನಕ್ಕೆ ಹೋಗಿ ಬರುವವರಿಗೆ ಇವುಗಳ ಕಾಟ ತಪ್ಪಿದ್ದಲ್ಲ. ಬಾಳೆಹಣ್ಣು, ತೆಂಗಿನಕಾಯಿ ಏನಿದ್ದರೂ ಓಡಿ ಬಂದು ಭಕ್ತರ ಕಾಲು ಹಿಡಿಯುತ್ತವೆ. ನಾನು ಕೂಡ ಕಾಲು ಹಿಡಿಸಿಕೊಂಡಿದ್ದೆ ಬಿಡಿ. :-)

ಇತ್ತೀಚೆಗೆ ಒಂದು ದಿನ ಬೆಳಿಗ್ಗೆ ಪೇಪರ್ ಓದುತ್ತಾ ಕೂತಿದ್ದೆ. ವಿಜಯ ಕರ್ನಾಟಕದ ಮುಖ ಪುಟದಲ್ಲೆ ಒಂದು ಲೇಖನ ನನ್ನ ಗೆಳೆಯ ಮಂಗನ ಬಗ್ಗೆ. ಆ ಮಂಗ ಎಮ್ಮೆ ಕಾಯೋ ಕೆಲಸ ಮಾಡುತ್ತೆ ಅಂತೆ!. ಒಂದು ಎಮ್ಮೆ ಮೇಲೆ ಕುಳಿತಿರೋ ಪೋಸ್ ನಲ್ಲಿ ಫೋಟೊ ತೆಗೆದಿದ್ದರು. “ಯಾರೇ ಕೂಗಾಡಲಿ ಊರೇ ಹೋರಾಡಲಿ” ಅನ್ನೊ ಥರ. ಅಯ್ಯೋ! ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿರಬೇಕಾದರೆ ಇಲ್ಲೂ ಒಂದು ಕೆಲಸಕ್ಕೆ ಪೈಪೋಟಿ ಬಂತಲ್ಲ ಅಂದ್ಕೊಂಡೆ. ಇನ್ನು ಮೇಲೆ ಎಮ್ಮೆ ಕಾಯೋ ಕೆಲಸಕ್ಕೆ ಲಾಯಕ್ಕು ಅಂತ ಬೈಯ್ಯೊ ಹಾಗೂ ಇಲ್ಲ. ಆ ಕೆಲಸನೇ ಖಾಲಿಯಾದ ಮೇಲೆ ಬೈಯೋದೆಲ್ಲಿ ಬಂತು? :-)

ಈ ಮಂಗ ಎಷ್ಟೊ ಸಲ ಗೆಳೆತನಕ್ಕೆ ಒಂದು ಸಾಕ್ಷಿಯಾಗಿ ಇರುವುದನ್ನು ನೋಡಬಹುದು. ಉದಾಹರಣೆಗೆ ರಾಮಾಯಣದಲ್ಲಿ ರಾಮ ಗೆದ್ದಿದ್ದೆ ವಾನರ ಸೈನ್ಯದ ಬಲದಿಂದ. ನಾವು ನಾಯಿ ಮಂಗ, ಬೆಕ್ಕು ಮಂಗ, ಎಮ್ಮೆ ಮಂಗ ಗೆಳೆತನದ ಬಗ್ಗೆ ವಿಡಿಯೊ, ಫೋಟೊ ನೋಡುತ್ತಾ ಇರುತ್ತೇವೆ. ಹೀಗೆ ನೋಡಿದಾಗ ನನಗೆ ಅನ್ನಿಸುತ್ತದೆ ಮಂಗನ ಗೆಳೆತನವಾದರೂ ಮಾಡು ಆದರೆ ಹೆಣ್ಣಿನ ಗೆಳೆತನ ಮಾಡಬೇಡ ಅಂತ.!! :-).

ಈ ಒಂದು ಪ್ರಾಣಿ ನನ್ನ ಗಮನ ಸೆಳೆದದ್ದು ಅದರ ಶಿಸ್ತಿನಿಂದ. ಮಂಗಗಳು ಅಂದಾಗ ಹಳ್ಳಿಯ ಜನ ಗಾಬರಿ ಆಗುತ್ತಾರೆ. ಇವು ಧಾಳಿಯಿಟ್ಟಾಗ ಅವರು ತುಂಬಾ ಕಾಳಜಿಯಿಂದ ಸಾಕಿದ ತೆಂಗಿನ ಮರ, ಬಾಳೆ ಗಿಡ, ಪಪ್ಪಾಯ ಗಿಡ, ಹಲಸಿನ ಹಣ್ಣು, ಮಾವಿನ ಹಣ್ಣು ಇವುಗಳಿಗೆ ಸಂಚಕಾರ ಬಂತೆಂದೇ ಅರ್ಥ. ನಮ್ಮ ಮನೆಯ ತೆಂಗಿನ ಮರಕ್ಕೂ ಅಂಥ ಒಂದು ಸಂಚಕಾರ ಬಂದಿತ್ತು. ಆದರೆ ಒಂದು ವಿಷಯ ನಂಗೆ ತುಂಬಾನೆ ಇಂಟೆರೆಸ್ಟಿಂಗ್ ಅನ್ನಿಸಿದ್ದು ಅಂದ್ರೆ, ಈ ಮಂಗಗಳು ಒಂದು ಮರವನ್ನು ಗುರುತು ಮಾಡಿಕೊಂಡು ಬಿಟ್ಟಿರುತ್ತವೆ ಮತ್ತು ಪ್ರತಿ ಸಲ ಆ ಮರದ ಎಳನೀರನ್ನು ಮಾತ್ರ ಕುಡಿಯುತ್ತವೆ. ಬಹುಶ: ನಮ್ಮ ಊರಿನ ಮಂಗಗಳಿಗೆ ಎಟಿಕ್ವೆಟೆ ಟ್ರೈನಿಂಗ್ ಆಗಿದೆಯೇನೋ!
ಹಾಗೆ ಶಿಸ್ತಿನ ಬಗ್ಗೆ ಹೇಳಿದಾಗ ನನಗೆ ಇನ್ನೊಂದು ಘಟನೆ ನೆನಪಿಗೆ ಬರುತ್ತಾ ಇದೆ. ನಮ್ಮ ಕಂಪೆನಿಯ ಕ್ಯಾಂಟೀನು ಇರುವುದು ಆರನೆ ಅಂತಸ್ತಿನಲ್ಲಿ. ಅಲ್ಲಿ ಹೀಗೆ ಹರಟುತ್ತಿರುವಾಗ ಬಂದನಲ್ಲ ನನ್ನ ಗೆಳೆಯ. ಮೆತ್ತಗೆ ಹೆಜ್ಜೆ ಹಾಕಿಕೊಂಡು ಕ್ಲೈಂಟ್ ಗಳಿಗೆ ಅಂತ ಇಟ್ಟಿರುವ ಮೇಜಿನ ಮೇಲೆ ಕುಳಿತೇ ಬಿಟ್ಟ. ಅವನ ಆಕಾರ ತುಂಬಾ ದೊಡ್ಡದಿತ್ತು ಅದಕ್ಕೆ ಎಲ್ಲರಿಗು ಒಂಥರಾ ಹೆದರಿಕೆ. ಆಗ ನನಗೆ ಇವನು ಯಾಕೆ ಅಲ್ಲಿ ಕೂತಿರಬಹುದು ಅನ್ನೋ ಯೋಚನೆ ಬೇರೆ. ಹಾಗೆ ನೋಡಿದಾಗ ಮೆತ್ತಗೆ ಬಟ್ಟೆ ಸರಿಸಿ ಒಂದು ಸೇಬು ಎತ್ಕೊಂಡೇ ಬಿಟ್ಟ. ನಾನು ಇನ್ನೇನು ಓಡಿ ಹೋಗ್ತಾನೆ ಅಂದ್ಕೊಂಡೆ. ಇಲ್ಲ, ಅಲ್ಲೆ ಕೂತ್ಕೊಂಡು ಶುರು ತಿನ್ನೋದಕ್ಕೆ. ಹೇಗೆ ಒಂದೇ ಹಣ್ಣನ್ನು ತೆಗೊಂಡ ಅಂದ್ರೆ ಕ್ಲೈಂಟ್ ಕೂಡ ಅದನ್ನು ನೋಡಿ ಕಲಿಯಬೇಕು ಬಿಡಿ. ಅದನ್ನು ಯಾರೊ ಒಬ್ಬ ನೋಡಿ ಓಡಿ ಹೋಗಿ ಕ್ಲಿಕ್ಕಿಸಿ ಬಂದಾಯ್ತು. ಹೀಗೆ ಒಂದು ಸ್ಪೆಷಲ್ ಕ್ಲೈಂಟ್ ನಮ್ಮ ಕಂಪೆನಿಗೆ.

ಇತ್ತೀಚೆಗೆ ಈ ಕಾಂಕ್ರೀಟ್ ಕಾಡಿನಲ್ಲಿ ಮಂಗಗಳಿಗೆ ಬದುಕುವುದು ಕೂಡ ಕಷ್ಟ ಆಗ್ತಾ ಇದೆ. ಹಿಂದಿನ ಕಂಪೆನಿಯಲ್ಲಿ ಇದ್ದಾಗ, ಮಂಗ ದಿನಾ ಕಂಪೆನಿಯ ನಲ್ಲಿಯಲ್ಲಿ ನೀರು ಕುಡಿಯಲು ಬರುತ್ತಿತ್ತು. ಅಲ್ಲು ವೆರೈಟಿ ಅನ್ನಿ, ಕೆಂಪು ಮಂಗ, ಕಪ್ಪು ಮಂಗ, ಬಾಲ ಇಲ್ಲದ ಮಂಗ ( ಅಂದರೆ ತುಂಡಾಗಿದೆ :-)) ಹೀಗೆ.

ಈ ಮಂಗನ ಕೆಲಸವಾದರೂ ಎಷ್ಟು ಅಲ್ಲವೆ. ಎಲ್ಲ ಕೆಲಸಗಳೂ ನಮ್ಮ ನಿಮ್ಮಂತೆ. ತಲೆ ಕೆರೆಯುವುದು, ಮೇಕಪ್ ಮಾಡುವುದು, ಹಾರುವುದು, ಕಾಟ ಕೊಡುವುದು ಹೀಗೆ. ನಮ್ಮದಂತೂ ವಿಪರೀತ ಮಂಗ ಬುದ್ಧಿ; ಮಂಗನಿಗೆ, ನಾಯಿಗಳಿಗೆ ಕಲ್ಲು ಹೊಡೆಯಲು ಯಾವಾಗ ಕರೆದರು ರೆಡಿ. ಇಂಥ ಕಥೆಗಳನ್ನು ಓದುವಾಗಲಾದರೂ ಮಂಗನಿಂದ ಮಾನವ ಅನ್ನೊ ಮಾತು ನಿಮ್ಮ ನೆನಪಿಗೆ ಬರ ಬಹುದು. ಅದರಿಂದಲಾದರು ಅವನಿಗೆ ನ್ಯಾಯ ಸಲ್ಲಬಹುದು ಅಲ್ಲವೆ? :-)

-- ರವಿಪ್ರಸಾದ್ ಶರ್ಮಾ ಕೆ.

Thursday, March 8, 2007

Tuesday, February 27, 2007

Lets be friends...


The Minds of two friends are like the lines of a railway track.
They never meet,
They never cross,
never ALONE,
But always go a long way TOGETHER.



Ananth Murthy at MindTree OSMOSIS


Wednesday, February 7, 2007

My Friends.



Left to Right: Hariprasad KS, Ajay, Sandesh, Ramapriya, Sharath

This is my Mandya gang.

Friday, January 12, 2007

Swami Vivekananda Quote ... Jan12th his b'day.


Do not hate anybody, because that hatred which comes out from you must, in the long run, come back to you. If you love, that love will come back to you, completing the circle.

-- Swami Vivekananda

Thursday, January 11, 2007

Thought...


Stand up, be bold, and take the blame on your own shoulders. Do not go about throwing mud at others; for all the faults you suffer from, you are the sole and only cause.
-- Swami Vivekananda

Women .. you can't beat them ;-)

Wednesday, January 10, 2007

Thought for the Day...


"With regard to excellence, it is not enough to know, but we must try to have and use it."
--Aristotle

Tuesday, January 9, 2007

They too need a change :-)

Today's Thought..


"When people honor each other, there is a trust established that leads to synergy, interdependence, and deep respect. Both parties make decisions and choices based on what is right, what is best, what is valued most highly."
--Blaine Lee

ಬ್ರಾಹ್ಮಣನಾಗಿ ನಾನು ... by ananthmurthy

click this link..

http://www.kannadasaahithya.com/uniarc/index.php?layout=main&cslot_1=241


Read this article. Have fun...